Breaking
21 Jun 2026, Sun

ನೇತ್ರಾವತಿ ನದಿಯಲ್ಲಿ ಮೃತದೇಹ ಪತ್ತೆ

ಬಂಟ್ವಾಳ: ವ್ಯಕ್ತಿಯೋರ್ವರ ಮೃತದೇಹವು ಪಾಣೆಮಂಗಳೂರು ಸಮೀಪದ ನೇತ್ರಾವತಿ ನದಿಯಲ್ಲಿ ಫೆ. 05 ರಂದು ಸಂಜೆ ಪತ್ತೆಯಾಗಿದೆ.

ಮೃತಪಟ್ಟವರನ್ನು ವೀರಕಂಭ ಗ್ರಾಮದ ಬಾಯಿಲ ನಿವಾಸಿ ಪ್ರಕಾಶ್ (35) ಎಂದು ತಿಳಿದು ಬಂದಿದೆ.

ಕಂಚಿಕಾರಪೇಟೆ ಸೇತುವೆ ಬಳಿ ನದಿ ಮಧ್ಯೆ ಮೃತದೇಹ ತೇಲಿಕೊಂಡಿರುವುದನ್ನು ಕಂಡ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ ದೋಣಿ ಸಹಾಯದಿಂದ ದಡಕ್ಕೆ ತರಲಾಯಿತು.

ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *