Breaking
8 Feb 2026, Sun

ಮುತ್ತೂರು ಬೆಜ್ಜೆಯಲ್ಲಿ ಫೆ. 7 ಹಾಗೂ 8 ರಂದು ದೈವಗಳ ಪುನರ್ ಪ್ರತಿಷ್ಠೆ, ನೇಮೋತ್ಸವ ಸಂಭ್ರಮ

ಬಂಟ್ವಾಳ: ಅನಾಧಿ ಕಾಲದಿಂದ ಆರಾದಿಸಿಕೊಂಡು ಬಂದಿರುವ ಮುತ್ತೂರು ಬೆಜ್ಜೆ ಬಂಜನ್ ಕುಟುಂಬದ ಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಮೊಗ ಸಮರ್ಪಣೆ ಹಾಗೂ ವೈಭವದ ನೇಮೋತ್ಸವವು ಫೆ. 7 ಮತ್ತು 8 ರಂದು ನಡೆಯಲಿದೆ.

ಫೆ. 7 ರಂದು ಬೆಳಿಗ್ಗೆ 8 ಗಂಟೆಗೆ ಶ್ರೀ ನಾಗ ಮತ್ತು ನಾಗಬ್ರಹ್ಮ ದೇವರಿಗೆ ತಂಬಿಲಸೇವೆ, ಗಣಪತಿ ಹೋಮ, ದೈವಗಳಿಗೆ ನವಕ ಕಲಶ, ಪುನರ್ ಪ್ರತಿಷ್ಠೆ, ಮುಡಿಪು ಶುದ್ಧ ನಡೆಯಲಿದೆ. ಕುಪ್ಪೆಟ್ಟು ಪಂಜುರ್ಲಿ ದರ್ಶನದೊಂದಿಗೆ ಮೊಗ ಸಮರ್ಪಣೆ ನಡೆಯಲಿದ್ದು, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ.

ರಾತ್ರಿ 7 ಗಂಟೆಯಿಂದ ಮಹಿಷಂದಾಯ, ಜುಮಾದಿ ಅಣ್ಣಪ್ಪ ಪಂಜುರ್ಲಿ ದೈವಗಳಿಗೆ ನೇಮೋತ್ಸವ ನಡೆಯಲಿದ್ದು ರಾತ್ರಿ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ.

ಫೆ. 8 ರಂದು ಶ್ರೀ ಸತ್ಯದೇವತೆ (ಪೊಸಪ್ಪೆ), ಹಿರಿಯಜ್ಜ, ಕುಪ್ಪೆಟ್ಟು ಮಂತ್ರದೇವತೆ, ಕಲ್ಲುರ್ಟಿ, ಕುಪ್ಪೆಟ್ಟು ಪಂಜುರ್ಲಿ, ಸ್ಥಳದ ಕಲ್ಲುರ್ಟಿ ಪಂಜುರ್ಲಿ, ಕುಟುಂಬದ ಕಲ್ಲುರ್ಟಿ ಪಂಜುರ್ಲಿ, ಕೊರತಿ, ಗುಳಿಗ ಮತ್ತು ಒಂಟಿ ಗುಳಿಗ ದೈವಗಳಿಗೆ ಕೋಲೋತ್ಸವ ಜರುಗಲಿದ್ದು, ರಾತ್ರಿ ಅನ್ನ ಸಂತರ್ಪಣೆ ನಡೆಯಲಿದೆ.

ಫೆ. 9 ರಂದು ಸಂಜೆ ಪರಿವಾರ ದೈವಗಳಿಗೆ ಪರ್ವ ಸೇವೆ ನಡೆಯಲಿದೆ ಎಂದು ಮುತ್ತೂರು ಬೆಜ್ಜೆ ಬಂಜನ್ ಕುಟುಂಬದ ಕಾರ್ಯಕಾರಿ ಸಮಿತಿ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *