Breaking
21 Jun 2026, Sun

ಮುಂಬೈ : ಲಿಫ್ಟ್ ನಲ್ಲಿ ಹೈಡ್ರೋಜನ್ ತುಂಬಿದ ಬಲೂನ್‌ಗಳು ಸ್ಫೋಟ

ಮುಂಬೈ : ವಸತಿ ಕಟ್ಟಡವೊಂದರ ಲಿಫ್ಟ್ ನ ಒಳಗೆ ಹೈಡ್ರೋಜನ್ ತುಂಬಿದ ಬಲೂನ್‌ಗಳು ಸ್ಫೋಟಗೊಂಡ ಘಟನೆ ಮುಂಬೈಯ ಉಪನಗರ ಗೋರೆಗಾಂವ್‌ ಎಂಬಲ್ಲಿ ನಡೆದಿದೆ.

ಲಿಫ್ಟ್‌ನೊಳಗೆ ಓರ್ವ ಮಹಿಳೆ ಟ್ರಾಲಿ ಬ್ಯಾಗ್‌ ಎಳೆದುಕೊಂಡು ಬಂದ ಬಳಿಕ ಮತ್ತೋರ್ವ ವ್ಯಕ್ತಿ ಗ್ಯಾಸ್‌ ತುಂಬಿದ ಬಲೂನ್‌ಗಳನ್ನು ಪಾಲಿಥಿನ್‌ ಕವರ್‌ನೊಳಗಿರಿಸಿಕೊಂಡು ತಂದಿದ್ದಾರೆ. ಲಿಫ್ಟ್ ಬಾಗಿಲು ಮುಚ್ಚಿದ ತಕ್ಷಣವೇ ಹೈಡ್ರೋಜನ್ ತುಂಬಿದ ಬಲೂನ್‌ಗಳು ಏಕಾಏಕಿ ಸ್ಫೋಟಗೊಂಡಿವೆ.

ತಕ್ಷಣವೇ ಲಿಫ್ಟ್‌ನಲ್ಲಿದ್ದವರು ಹೊರಕ್ಕೆ ಜಿಗಿದಿದ್ದು, ಇಬ್ಬರಿಗೆ ಸುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಘಟನೆಯ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Leave a Reply

Your email address will not be published. Required fields are marked *