ಮಂಗಳೂರು: ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿಯಾಗಿ ಹಿಂಬದಿ ಸವಾರೆ ದಾರುಣವಾಗಿ ಸಾವನ್ನಪ್ಪಿದ ಘಟನೆ ನಂತೂರಿನಲ್ಲಿ ಫೆ. 04ರಂದು ನಡೆದಿದೆ.
ಮೃತರನ್ನು ಬಲ್ಲಾಳ್‌ಬಾಗ್ ನ ನಿವಾಸಿ ದೀಪ್ತಿ (26) ಎಂದು ಗುರುತಿಸಲಾಗಿದೆ.

ಬರ್ತ್ ಡೇ ಪಾರ್ಟಿಗೆಂದು ಕಿಶೋರ್ (32) ಹಾಗೂ ದೀಪ್ತಿ ಬೈಕ್ ನಲ್ಲಿ ವಾಮಂಜೂರಿಗೆ ತೆರಳುತ್ತಿದ್ದ ಸಂದರ್ಭ ನಂತೂರು ಬಸ್ ನಿಲ್ದಾಣದ ಸಮೀಪ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ದೀಪ್ತಿ ಬಸ್ ಮುಂಭಾಗಕ್ಕೆ ಎಸೆಯಲ್ಪಟ್ಟಿದ್ದು, ಬಸ್ ಆಕೆಯ ಮೇಲೆ ಹರಿದ ಪರಿಣಾಮ ಅವರು ಕೊನೆಯುಸಿರೆಳೆದಿದ್ದಾರೆ.

ಸವಾರ ಕಿಶೋರ್ (32) ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಕದ್ರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








