Breaking
21 Sep 2026, Mon

ಚಲಿಸುತ್ತಿದ್ದ ಬೈಕ್‌ನಿಂದ ಕೆಳಗೆ ಬಿದ್ದು ಮಹಿಳೆ ಸಾವು

ಉಡುಪಿ: ಕಿನ್ನಿಮುಲ್ಕಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬೈಕ್‌ನಿಂದ ಕೆಳಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟ ಮಹಿಳೆಯನ್ನು ಭಾಗೀರಥಿ (53) ಎಂದು ಗುರುತಿಸಲಾಗಿದೆ.

ಮಗ ರಜತ್ ಆಚಾರ್ಯ ಅವರು ತಾಯಿ ಭಾಗೀರಥಿ ಅವರನ್ನು ಬೈಕ್ ಹಿಂಬದಿ ಕುಳ್ಳಿರಿಸಿಕೊಂಡು ಕಾಪು ಕಡೆಯಿಂದ ಉಡುಪಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಕಿನ್ನಿಮುಲ್ಕಿಯ ‘ಜೈ ವೀಲ್ ಅಲೈನ್ಮೆಂಟ್’ ಬಳಿ ಬೈಕ್ ಸ್ಕಿಡ್ ಆಗಿ ಸವಾರನ ನಿಯಂತ್ರಣ ತಪ್ಪಿ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ.

ಅಪಘಾತದಲ್ಲಿ ಭಾಗೀರಥಿ ಅವರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಈ ಕುರಿತು ಉಡುಪಿ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *