Breaking
3 Feb 2026, Tue

ಸಂಪಾಜೆಯಲ್ಲಿ ರಿಕ್ಷಾಕ್ಕೆ ಹಿಂದಿನಿಂದ ಗುದ್ದಿ ಪರಾರಿಯಾಗಿದ್ದ ಕಾರು ಚಾಲಕ ಪೊಲೀಸ್‌ ವಶಕ್ಕೆ

ಸುಳ್ಯ : ಸಂಪಾಜೆಯಲ್ಲಿ ರಿಕ್ಷಾಕ್ಕೆ ಹಿಂದಿನಿಂದ ಗುದ್ದಿ, ಕಾರು ನಿಲ್ಲಿಸದ್ದೆ ಪರಾರಿಯಾಗಿದ ಕಾರು ಚಾಲಕನನ್ನು ಮಡಿಕೇರಿ ಸಮೀಪದ ಕಾಟಕೇರಿಯಲ್ಲಿ ಪೋಲೀಸರು ವಶಕ್ಕೆ ಪಡೆದಿದ್ದಾರೆ.

ಕಾರಲ್ಲಿದ್ದವರು ಮೈಸೂರಿನವರೆಂದು ತಿಳಿದುಬಂದಿದೆ.

ರಿಕ್ಷಾ ಸಂಪಾಜೆ ಗೇಟಿನಿಂದ ಚೆಡಾವು ಕಡೆ ತೆರಳುತ್ತಿದ್ದು ಕೊಡಗು ಸಂಪಾಜೆ ಪೆಟ್ರೋಲ್‌ ಪಂಪ್‌ ಬಳಿಯ ತಿರುವಿನಲ್ಲಿ ಹಿಂದಿನಿಂದ ಬಂದ ಕಾರು ಢಿಕ್ಕಿ ಹೊಡೆದು ಪರಾರಿಯಾಗಿತ್ತು. ಈ ವೇಳೆ ಎದುರಿನಿಂದ ಬರುತ್ತಿದ್ದ ಟಿಪ್ಪರ್ ಲಾರಿಯ ಚಕ್ರಗಳ ಕೆಳಗೆ ಸಿಲುಕಿ ರಿಕ್ಷಾ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದ. ರಿಕ್ಷಾ ಚಾಲಕ ಸುಂದರ ಅವರ ಸಾವಿಗೆ ಕಾರಣವಾದ ಕಾರನ್ನು ಪೋಲೀಸರು ತಮ್ಮ ವಶ ಇರಿಸಿಕೊಂಡು, ಈ ಕುರಿತು ವಿಚಾರಣೆ ಮುಂದುವರಿದಿದೆ.

Leave a Reply

Your email address will not be published. Required fields are marked *