ಸುಳ್ಯ : ಆನೆಗಳ ಹಿಂಡೊಂದು ರಾತ್ರಿ ವೇಳೆ ಕೃಷಿ ತೋಟಕ್ಕೆ ಲಗ್ಗೆ ಇಟ್ಟು ಸಂಪೂರ್ಣ ಹಾನಿ ಉಂಟು ಮಾಡಿದ ಘಟನೆ ಸಂಪಾಜೆ ಗ್ರಾಮದ ಗೂನಡ್ಕದ ಪೆಲ್ತಡ್ಕದಲ್ಲಿ ಜ.28 ರಂದು ನಡೆದಿದೆ.

ಗೂನಡ್ಕದ ಪ್ರಮೀಳಾ ಪೆಲ್ತಡ್ಕ ಅವರ ಮನೆಯ ಮುಂಭಾಗದಲ್ಲಿ ಆನೆ ಹಿಂಡು ಕಾಣಿಸಿಕೊಂಡಿದ್ದು , ಆನೆಯು ತೋಟಕ್ಕೆ ನುಗ್ಗಿ , ತೆಂಗು, ಅಡಿಕೆ , ಬಾಳೆ ಗಿಡಗಳನ್ನು ಸಂಪೂರ್ಣ ಹಾನಿಮಾಡಿದೆ. ಅಲ್ಲದೆ ಗಣೇಶ , ಜಗನ್ನಾಥ, ವಸಂತ ಪೆಲ್ತಡ್ಕ , ಮನಮೋಹನ ಅವರ ತೋಟಕ್ಕೆ ನುಗ್ಗಿ ಸಂಪೂರ್ಣ ಹಾನಿ ಮಾಡಿದೆ.
ಆನೆ ದಾಳಿಯಿಂದ ಕೃಷಿಕರು ಆತಂಕಕ್ಕೆ ಒಳಗಾಗಿದ್ದು, ಸಂಬಂಧ ಪಟ್ಟ ಅಧಿಕಾರಿಗಳು ಹಾನಿಗೊಳಗಾದ ಕೃಷಿಕರ ತೋಟಕ್ಕೆ ಭೇಟಿ ನೀಡಿ ಆನೆ ಹಾವಳಿಯನ್ನು ತಡೆಗಟ್ಟುವ ಬಗ್ಗೆ ಕ್ರಮಕೈಗೊಳ್ಳಲು ಹಾಗೂ ಕೃಷಿ ಹಾನಿಗೊಳಗಾದವರಿಗೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.





