Breaking
4 Feb 2026, Wed

ಕಿರು ಸೇತುವೆ ಕುಸಿದು ತೋಡಿಗೆ ಬಿದ್ದ ಲಾರಿ: ಚಾಲಕನಿಗೆ ಗಾಯ

ಸುಳ್ಯ: ಮಂಡೆಕೋಲು ಗ್ರಾಮದ ಉದ್ದಂತಡ್ಕ ಎಂಬಲ್ಲಿ ಕಿರು ಸೇತುವೆ ಕುಸಿದು ಜಲ್ಲಿ ತುಂಬಿದ ಲಾರಿಯೊಂದು ತೋಡಿಗೆ ಬಿದ್ದು ಲಾರಿ ಚಾಲಕ ಗಾಯಗೊಂಡ ಘಟನೆ ಜ.19 ರಂದು ನಡೆದಿದೆ.

ಕಳೆದ ಮಳೆಗಾಲದಿಂದಲೇ ಮಣ್ಣು ಕುಸಿದು ಶಿಥಿಲಗೊಂಡಿದ್ದ ಈ ಕಿರು ಸೇತುವೆಯ ಮೇಲೆ ವಾಹನ ಸಂಚಾರ ನಿಷೇಧಿಸಿ ಎಚ್ಚರಿಕಾ ಫಲಕ ಅಳವಡಿಸಲಾಗಿತ್ತು. ಆದರೂ ನಿಷೇಧವನ್ನು ಉಲ್ಲಂಘಿಸಿ ಜಲ್ಲಿ ತುಂಬಿದ ಲಾರಿಯೊಂದು ಸೇತುವೆ ಮೇಲೆ ಸಂಚರಿಸಿದ ವೇಳೆ ಸೇತುವೆ ಕುಸಿದು ಈ ಅವಘಡ ಸಂಭವಿಸಿದೆ.

ಅಪಘಾತದಲ್ಲಿ ಲಾರಿ ಚಾಲಕನಿಗೆ ಗಾಯಗಳಾಗಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *