Breaking
4 Feb 2026, Wed

ಬಿಸಿ ನೀರು ಬಿದ್ದು ಗಾಯಗೊಂಡಿದ್ದ ಮಹಿಳೆ ಸಾವು

ಸುಳ್ಯ: ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ಮೈಮೇಲೆ ಬಿಸಿ ನೀರು ಬಿದ್ದು ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟ ಮಹಿಳೆಯನ್ನು ಕಲ್ಲಡ್ಕ ಗ್ರಾಮದ ಸರೋಜಿನಿ (66)ಎಂದು ಗುರುತಿಸಲಾಗಿದೆ.

ಜ.9ರಂದು ಅನ್ನದ ಪಾತ್ರೆಯ ಮೇಲಿದ್ದ ಬಿಸಿ ನೀರಿನ ಪಾತ್ರೆ ಮಗುಚಿ ಬಿದ್ದು ಈ ಘಟನೆ ಸಂಭವಿಸಿದೆ. ಬಿಸಿ ನೀರು ಮೈಮೇಲೆ ಬಿದ್ದಿದ್ದರಿಂದ ಹೆಚ್ಚಿನ ಗಾಯವಾಗಿಲ್ಲ ಎಂದು ಆರಂಭದಲ್ಲಿ ಗೊತ್ತಾಗದೇ ಎಣ್ಣೆ ಹಚ್ಚಲಾಗಿತ್ತು. ನಂತರ ಜ. 14ರಂದು ರಾತ್ರಿ ಅವರು ತೀರಾ ಅಸ್ವಸ್ಥರಾಗಿದ್ದು, ತಕ್ಷಣವೇ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಈ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಎಂದು ದಾಖಲಾಗಿದೆ.

Leave a Reply

Your email address will not be published. Required fields are marked *