ಬಂಟ್ವಾಳ: ಸಜೀಪ ಮುನ್ನೂರಿನ ಶ್ರೀ ಮಹಾಕಾಳಿ ದೇವಸ್ಥಾನಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಪ್ರಸಾದ ನೀಡಿದರು.

ಈ ವೇಳೆ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ರವೀಂದ್ರ ಕಂಬಳಿ, ಉದ್ಯಮಿ ವಿವೇಕ್ ಶೆಟ್ಟಿ ನಗ್ರೀಗು ತ್ತು, ಎಸ್ ಶ್ರೀಕಾಂತ್ ಶೆಟ್ಟಿ, ವಿಶ್ವನಾಥ್ ಕೊಟ್ಟಾರಿ, ಸೋಮಶೇಖರ, ಪಂಚಾಯತಿ ಸದಸ್ಯ ಪ್ರವೀಣ ಗಟ್ಟಿ, ಸರೋಜಿನಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.




