Breaking
22 Mar 2026, Sun

ವಿಟ್ಲ ಮಹಾರಥೋತ್ಸವ: ಭಕ್ತಾದಿಗಳಿಗಾಗಿ ವಿಶೇಷ ಪಾರ್ಕಿಂಗ್ ವ್ಯವಸ್ಥೆ

ಬಂಟ್ವಾಳ: ವಿಟ್ಲ ಶ್ರೀ ಮಹತೋಭಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮಹಾರಥೋತ್ಸವದ ಪ್ರಯುಕ್ತ ವಾಹನ ದಟ್ಟಣೆ ತಡೆಗಟ್ಟುವ ಸಲುವಾಗಿ ಪೊಲೀಸ್ ಇಲಾಖೆ ಜ. 21 ರಂದು ಬರುವ ಭಕ್ತಾದಿಗಳಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಿದೆ.

ಕೇರಳ, ಸಾರಡ್ಕ ಪೆರುವಾಯಿ ಪುಣಚ ಕನ್ಯಾನ ಕಡೆಯಿಂದ ಬರುವ ಭಕ್ತಾದಿಗಳಿಗೆ ಬಾಕಿ ಮಾರು ಗದ್ದೆಯಲ್ಲಿ ಹಾಗೂ ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣದ ಬಲಿ ವಾಹನ ಪಾರ್ಕಿಂಗಿನ ವ್ಯವಸ್ಥೆಯನ್ನು ಮಾಡಲಾಗಿದೆ.

ಸಾಲೆತ್ತೂರು, ಕುಡ್ತಮುಗೇರು ಕಡೆಯಿಂದ ಬರುವ ಭಕ್ತಾದಿಗಳಿಗೆ ವಿಟ್ಲ ಮಾದರಿ ಶಾಲಾ ವಠಾರ ಹಾಗೂ ಕಾಲೇಜು ಮೈದಾನದಲ್ಲಿ ವಾಹನ ಪಾರ್ಕಿಂಗಿನ ವ್ಯವಸ್ಥೆ ಮಾಡಲಾಗಿದೆ.

ಪುತ್ತೂರು ಕಂಬಳ ಬೆಟ್ಟು ಕುಂಡಡ್ಕ ಕಡೆಯಿಂದ ಬರುವ ಭಕ್ತಾದಿಗಳಿಗೆ ವಾಹನದ ಪಾರ್ಕಿಂಗ್ ವ್ಯವಸ್ಥೆಯನ್ನು ವಿಟ್ಲ ಮೇಗಿನಪೇಟೆ ಬೈಟ್‌ ಆಡಿಟೋರಿಯಂ ನಲ್ಲಿ ವ್ಯವಸ್ಥೆ ಮಾಡಲಾಗಿರುತ್ತದೆ. ಹಾಗೂ ನಾಳೆ ದಿನ ವಿಟ್ಲ ಬಿಎಸ್‌ಎನ್‌ಎಲ್ ಆಫೀಸ್ ಕಡೆಯಿಂದ, ಬೊಬ್ಬೆಕೇರಿ ರಸ್ತೆಯಿಂದ ಹಾಗೂ ವಿಟ್ಲ ಕ್ವಾಲಿಟಿ ಬೇಕರಿ ಕಡೆಯಿಂದ ಹೋಗುವ ರಸ್ತೆಗಳಲ್ಲಿ ಯಾವುದೇ ವಾಹನಗಳಿಗೆ ಪ್ರವೇಶವಿರುವುದಿಲ್ಲ. ವಾಹನ ಚಾಲಕರು ಹಾಗೂ ಪ್ರಯಾಣಿಕರು ನಿಯಮ ಪಾಲಿಸುವ ಮೂಲಕ ಕಾನೂನು ಸುವ್ಯವಸ್ಥೆಗೆ ಸಹಕರಿಸಬೇಕೆಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *