ಸುಳ್ಯ: ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಪಂದ್ಯಾಟದಲ್ಲಿ ಮೊಡಂಕಾಪಿನ ಇನ್ವೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯ 17 ವಿದ್ಯಾರ್ಥಿಗಳು ಭಾಗವಹಿಸಿ ಕಟಾ ಹಾಗೂ ಕುಮಿಟಿ ಕಲರ್ ಬೆಲ್ಟ್ ವಿಭಾಗದಲ್ಲಿ 6 ಚಿನ್ನ , 6 ಬೆಳ್ಳಿ ಹಾಗೂ 11 ಕಂಚಿನ ಪದಕಗಳನ್ನು ಪಡೆದಿದ್ದಾರೆ.

ಶಾಲಾ ಮುಖ್ಯೋಪಾಧ್ಯಾಯರಾದ ವಂ. ಮೆಲ್ವಿನ್ ಲೋಬೋ, ಕರಾಟೆ ತರಗತಿಯ ಉಸ್ತುವರಿಗಳಾದ ರಮ್ಯ, ಕರಾಟೆ ತರಬೇತುರರಾದ ಸೆನ್‌ಸಾಯಿ ಜೆರಾಲ್ಡ್ ಫೆರ್ನಾಂಡಿಸ್ ಪೆದಮಲೆ ಅವರು ವಿಜೇತರಾದ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಶುಭ ಹಾರೈಸಿದರು.





