Breaking
22 Mar 2026, Sun

ಟ್ರೇಡಿಂಗ್ ಮಾರ್ಕೆಟ್ ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ

ಬಂಟ್ವಾಳ: ಟ್ರೇಡಿಂಗ್ ಮಾರ್ಕೆಟ್ ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾದ ಘಟನೆ ನಡೆದಿದೆ.

ನಾಪತ್ತೆಯಾದವರನ್ನು ರಾಯಿ ಗ್ರಾಮದ ಕೊಯಿಲ ನಿವಾಸಿ ಶ್ವಾನ್ ಫ್ರಾನ್ಸಿಸ್ ಸಿಕ್ವೇರಾ (29) ಎಂದು ಗುರುತಿಸಲಾಗಿದೆ.

ಕಳೆದ ಐದು ವರ್ಷಗಳಿಂದ ಟ್ರೇಡಿಂಗ್ ಮಾರ್ಕೆಟಿಂಗ್ ನಲ್ಲಿ ಕೆಲಸ ಮಾಡುತ್ತಿದ್ದ ಶ್ವಾನ್ ಫ್ರಾನ್ಸಿಸ್ ಸಿಕ್ವೇರಾ ಅವರು ಜ.7 ರಂದು ಬಿ.ಸಿ ರೋಡಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟು ಬಳಿಕ ಮನೆಗೆ ವಾಪಾಸ್ಸಾಗದೇ ಕಾಣೆಯಾಗಿದ್ದಾರೆ.

ಮಾರ್ಕೆಟಿಂಗ್‌ ಕೆಲಸದಲ್ಲಿ ನಷ್ಟವಾಗುತ್ತಿರುವ ಬಗ್ಗೆ ಮನೆಯವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಗೆಳೆಯರ ಬಳಿ ಸಾಲ ಪಡೆದು ಮಾರ್ಕೆಟಿಂಗ್ ಕೆಲಸ ಮಾಡುವ ಬಗ್ಗೆಯೂ ಮನೆಯವರಲ್ಲಿ ಹೇಳಿಕೊಂಡಿದ್ದರು ಎಂದು ತಿಳಿದುಬಂದಿದೆ.

ಕಾಣೆಯಾಗಿರುವ ಮಗನನ್ನು ಪತ್ತೆ ಹಚ್ಚುವಂತೆ ತಾಯಿ ಪ್ಲೇವಿಯ ಸಿಕ್ವೇರಾ ಅವರು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಆನ್ ಲೈನ್ ಮಾರ್ಕೆಟಿಂಗ್ ವ್ಯವಹಾರದಲ್ಲಿ ನಷ್ಟವಾಗಿರುವ ಕಾರಣವೋ ಅಥವಾ ಬೇರೆ ಕಾರಣಗಳಿಂದಲೋ ಶ್ವಾನ್ ಫ್ರಾನ್ಸಿಸ್ ಸಿಕ್ವೇರಾ ಅವರು ಈತ ನಾಪತ್ತೆಯಾಗಿರಬಹುದೆಂದು ಶಂಕಿಸಲಾಗಿದೆ.

Leave a Reply

Your email address will not be published. Required fields are marked *