Breaking
25 Sep 2026, Fri

ಕಡಬದಲ್ಲಿ ಮೂರೂವರೆ ವರ್ಷದ ಮಗುವಿನ ಜೊತೆ ಮಹಿಳೆ ನಾಪತ್ತೆ, ಗಂಡ ಆತ್ಮಹತ್ಯೆಗೆ ಯತ್ನ

ಕಡಬ : ಮಹಿಳೆಯೋರ್ವರು ತನ್ನ ಮೂರೂವರೆ ವರ್ಷದ ಮಗುವಿನ ಜೊತೆ ನಾಪತ್ತೆಯಾಗಿರುವ ಘಟನೆ ಕಡಬದಲ್ಲಿ ನಡೆದಿದೆ.

ನೀರಾಜೆ ನಿವಾಸಿ ಮುನೀರ್ ಎಂಬವರ ಪತ್ನಿ ನೇಹಾ(26) ಮತ್ತು ಪುತ್ರ ಮಹಮ್ಮದ್ ನಿಹಾಲ್ (4) ಕಾಣೆಯಾದವರು.

ಮುನೀರ್ ಅವರು ಪತ್ನಿ ನೇಹಾ ಮತ್ತು ಪುತ್ರ ಮಹಮ್ಮದ್ ನಿಹಾಲ್ ಜೊತೆ ಮೂರು ತಿಂಗಳ ಹಿಂದೆ ಬೆಂಗಳೂರಿಗೆ ಕೆಲಸಕ್ಕೆಂದು ತೆರಳಿದ್ದು, ಡಿಸೆಂಬರ್ 25 ರಂದು ಮುನೀರ್ ಓರ್ವನೇ ಮನೆಗೆ ಬಂದಾಗ ಹೆಂಡತಿ ಮತ್ತು ಮಗನ ಬಗ್ಗೆ ವಿಚಾರಿಸಲಾಗಿ, ಎರಡು ದಿನಗಳಲ್ಲಿ ಬರುವುದಾಗಿ ತಿಳಿಸಿರುತ್ತಾರೆ.

ಮುಂದುವರಿದು ಡಿಸೆಂಬರ್ 30 ರಂದು ಮುನೀರ್ ನೇಣುಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು, ಈ ವೇಳೆ ಸ್ಥಳೀಯರು ರಕ್ಷಿಸಿದ್ದಾರೆ ಎನ್ನಲಾಗಿದೆ. ಜನವರಿ 3 ರಂದು ಮುನೀರ್ ಅವರು ಪುನಃ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ನಡುವೆ ನೇಹಾ ಹಾಗೂ ನಿಹಾಲ್ ದೂರವಾಣಿ ಕರೆಗೂ ಸಿಗದೆ, ಸಂಬಂಧಿಕರ ಮನೆಯಲ್ಲೂ ಪತ್ತೆಯಾಗಿಲ್ಲ. ಈ ಬಗ್ಗೆ ಕಡಬ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Leave a Reply

Your email address will not be published. Required fields are marked *