Breaking
21 Jun 2026, Sun

ಬಿಜೆಪಿ ಕಾರ್ಯಕರ್ತೆ ಸುಜಾತಾ ಮೇಲಿನ ಪೊಲೀಸ್ ವರ್ತನೆ ಖಂಡನೀಯ: ಸುಲೋಚನಾ ಭಟ್

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ ಸಂದರ್ಭದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಏರ್ಪಟ್ಟ ಗಲಾಟೆಯ ನೆಪವನ್ನು ಮುಂದಿಟ್ಟುಕೊಂಡು ಮಾಜಿ ಕಾರ್ಪೊರೇಟರ್ ಹಾಗೂ ಕಾಂಗ್ರೆಸ್ ನಾಯಕಿ ಸುನಂದರವರು ಪೊಲೀಸರಿಗೆ ಕೊಟ್ಟ ದೂರಿನ ಮೇಲೆ ಹುಬ್ಬಳ್ಳಿ ಪೊಲೀಸರು ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತೆ, ಪ. ಜಾತಿಗೆ ಸೇರಿದ ಸುಜಾತ ಎಂಬವರನ್ನು ಬಂಧಿಸಿದ್ದಾರೆ.

ಸುಜಾತ ಅವರನ್ನು ಪೊಲೀಸ್ ಠಾಣೆಗೆ ಕರೆತಂದು ದಲಿತ ಮಹಿಳೆಗೆ ಹಿಗ್ಗಾ ಮುಗ್ಗಾ ಮಾಡಿದ ಪರಿಣಾಮ ಸುಜಾತಾರವರು ಪೊಲೀಸರ ದುರ್ವರ್ತನೆ ಬಗ್ಗೆ ಆಕ್ಷೇಪ ವ್ಯಕ್ತ ಪಡುಸಿದಾಗ ಅದನ್ನೇ ನೆಪವಾಗಿಸಿ ಮಹಿಳೆಯನ್ನು ವಿವಸ್ತ್ರಗೊಳಿಸಿ, ಅಮಾನವೀಯವಾಗಿ ವರ್ತಿಸಿಕೊಂಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬಂದಿದೆ.

ಮಹಿಳೆಯರಿಗೆ ರಕ್ಷಣೆ ನೀಡುವ ಪೊಲೀಸರೇ ಈ ರೀತಿಯಲ್ಲಿ ಮಹಿಳೆ ಮೇಲೆ ರಾಕ್ಷಸಿಯ ವರ್ತನೆ ತೋರಿಸಿರುವುದು ರಾಜ್ಯದ ನಾಗರೀಕ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ. ರಾಜಕೀಯ ಪ್ರೇರಿತವಾಗಿ ಹುಬ್ಬಳ್ಳಿ ಪೊಲೀಸರು ಮಹಿಳೆಯ ಮೇಲೆ ನಡೆಸಿದ ಅಮಾನವೀಯ ಕೃತ್ಯ ಅತ್ಯಂತ ಖಂಡನೀಯವಾಗಿದ್ದು ಪೋಲೀಸರ ಈ ರೀತಿಯ ತಾಳಿಬಾನಿ ಸಂಸ್ಕೃತಿ ಇಡೀ ಮಾನವ ಸಮಾಜಕ್ಕೆ ಕಳಂಕವಾಗಿದೆ.

ಪೋಲೀಸರ ಈ ಕೃತ್ಯದ ಕುರಿತು ರಾಜ್ಯದ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಪೊಲೀಸರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಬಿಜೆಪಿ ಸಮಿತಿಯ ಮಾಜಿ ಉಪಾಧ್ಯಕ್ಷೆ ಸುಲೋಚನಾ ಜಿ. ಕೆ. ಭಟ್ ಪೊಲೀಸ್ ಇಲಾಖೆಯನ್ನು ಅಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *