Breaking
21 Mar 2026, Sat

ಮೂಡುಬಿದಿರೆಯಲ್ಲಿ ಪೆಟ್ರೋಲ್‌ ಬಂಕ್‌ ಸಿಬ್ಬಂದಿಗಳ ಮೇಲೆ ಹಲ್ಲೆ

ಮೂಡುಬಿದಿರೆ: ಪೆಟ್ರೋಲ್‌ ಬಂಕ್‌ನ ಸಿಬ್ಬಂದಿ ಮೇಲೆ ಯುವಕರು ಹಲ್ಲೆ ನಡೆಸಿದ ಘಟನೆ ಮೂಡಬಿದಿರೆಯಲ್ಲಿ ಡಿ. 11ರಂದು ನಡೆದಿದೆ.

ಹಲ್ಲೆಗೊಳಗಾದವರನ್ನು ಸುರೇಶ್, ಮೌನೇಶ್ ಮತ್ತು ಪ್ರವೀಣ್‌ ಎಂದು ಗುರುತಿಸಲಾಗಿದೆ.

ಎರಡು ದ್ವಿಚಕ್ರ ವಾಹನದಲ್ಲಿ ಬಂದ ನಾಲ್ವರು ಯುವಕರು ಸಿಬ್ಬಂದಿ ಸುರೇಶ್ ಮತ್ತಿತರರಿಗೆ ಹಲ್ಲೆ ನಡೆಸಿದ್ದಾರೆ. ಗಾಯಗೊಂಡಿರುವ ಸಿಬ್ಬಂದಿ ಮತ್ತು ನಾಲ್ವರು ಯುವಕರು ಪರಿಚಿತರಾಗಿದ್ದು, ಹಳೆ ದ್ವೇಷದಿಂದ ಹಲ್ಲೆ ನಡೆಸಿರಬಹುದೆಂದು ಶಂಕಿಸಲಾಗಿದೆ.

ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *