Breaking
21 Mar 2026, Sat

ಕಾರಿನಲ್ಲಿ ಬಂದ ಅಪರಿಚಿತರು ರಿಕ್ಷಾವನ್ನು ಅಡ್ಡಗಟ್ಟಿ : 19 ಸಾವಿರ ರೂ. ನಗದು ದೋಚಿ ಪರಾರಿ

ಮೂಡುಬಿದಿರೆ : ಕಾರಿನಲ್ಲಿ ಬಂದ ಅಪರಿಚಿತರು ರಿಕ್ಷಾವನ್ನು ಅಡ್ಡಗಟ್ಟಿ ಹಣ್ಣಿನ ವ್ಯಾಪಾರಿ ಬಳಿಯಿದ್ದ 19 ಸಾವಿರ ರೂ. ನಗದು ದೋಚಿ ಪರಾರಿಯಾದ ಘಟನೆ ಡಿ.11 ರಂದು ಮಾಂಟ್ರಾಡಿಯಲ್ಲಿ ನಡೆದಿದೆ.

ಹಣ ಕಳೆದುಕೊಂಡವರನ್ನು ಈದು ಗ್ರಾಮದ ಮುಹಮ್ಮದ್ ಎಂದು ಗುರುತಿಸಲಾಗಿದೆ.

ಮೂಡುಬಿದಿರೆ ಮಾರುಕಟ್ಟೆಯಲ್ಲಿ ಹಣ್ಣು ಹಂಪಲು ವ್ಯಾಪಾರ ಮಾಡುತ್ತಿದ್ದ ಮೊಹಮ್ಮದ್ ಅವರು ಡಿ. 11ರಂದು ನಸುಕಿನ ಜಾವ ಮಂಗಳೂರಿನಿಂದ ಹಣ್ಣು ಖರೀದಿಸಲು ಈದು ಗ್ರಾಮದಿಂದ ರಿಕ್ಷಾದಲ್ಲಿ ಹೊರಟಿದ್ದರು, ಈ ವೇಳೆ ದಾರಿ ಮಧ್ಯೆದಲ್ಲಿ ಕಾರಿನಲ್ಲಿ ಬಂದ ಅಪರಿಚಿತರು ರಿಕ್ಷಾಗೆ ಅಡ್ಡ ಕಟ್ಟಿ ಬೆದರಿಕೆ ಹಾಕಿ ಅವರ ಬಳಿಯಿದ್ದ ನಗದು ಹಣವನ್ನು ಕಸಿದು ಪರಾರಿಯಾಗಿದ್ದಾರೆ.

ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *