Breaking
10 May 2026, Sun

ಅನಂತಾಡಿ ಗ್ರಾಮ ಪಂಚಾಯತ್ ಭಾರತ್ ನಿರ್ಮಾಣ ರಾಜೀವ ಗಾಂಧಿ ಸೇವಾ ಕೇಂದ್ರ ಕಟ್ಟಡ ಲೋಕಾರ್ಪಣೆ: ಕ್ಯಾ.ಬ್ರಿಜೇಶ್ ಚೌಟ ಶುಭ ಹಾರೈಕೆ

ಬಂಟ್ವಾಳ: ಅರ್ಹ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ಯೋಜನೆಗಳ ಎಲ್ಲಾ ಸವಲತ್ತುಗಳು ಸಿಗುವಂತೆ ಕೆಲಸ ಮಾಡಿದರೆ ಗ್ರಾಮ ಅಭಿವೃದ್ಧಿಯಾಗುತ್ತದೆ. ಈ ಗ್ರಾಮ ಪಂಚಾಯತ್ ನ ಅಭಿವೃದ್ಧಿ ಕಾರ್ಯ ಜಿಲ್ಲೆಯ ಎಲ್ಲಾ ಪಂಚಾಯತ್ ಗಳಿಗೂ ಮಾದರಿಯಾಗಲಿ. ಪ್ರಧಾನಿ ಮೋದಿಯವರ ವಿಕಸಿತ ಭಾರತದ ಕಲ್ಪನೆಯ ಪ್ರಕಾರ ಅಭಿವೃದ್ಧಿ ಕೆಲಸ ಮಾಡುವ ಶಕ್ತಿಯನ್ನು ಮಾತೆ ಉಳ್ಳಾಲ್ತಿಯು ಅನುಗ್ರಹಿಸಲಿ ಎಂದು ಮಂಗಳೂರು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.

ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ದ.ಕ.ಜಿಲ್ಲಾ ಪಂಚಾಯತ್, ಅನಂತಾಡಿ ಗ್ರಾಮ ಪಂಚಾಯತ್ ಭಾರತ್ ನಿರ್ಮಾಣ ರಾಜೀವ ಗಾಂಧಿ ಸೇವಾ ಕೇಂದ್ರ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಅನಂತಾಡಿ ಗ್ರಾಮಪಂಚಾಯತ್ ಅಭಿವೃದ್ಧಿ ಕಾರ್ಯವನ್ನು ‌ಶ್ಲಾಘಿಸಿ ಕಾರ್ಯಕರ್ತರನ್ನು ಅಭಿನಂದಿಸಿದರು.

ಅನಂತಾಡಿ ಸನತ್ ಕುಮಾರ್ ಮಾತನಾಡಿ, ನರೇಗಾ ಯೋಜನೆಯಡಿ ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಿದ್ದು, ಸಂಸದರ ನಿಧಿಯಿಂದ 17 ಲಕ್ಷ ರೂ. ಶಾಸಕರ ನಿಧಿಯಿಂದ 10ಲಕ್ಷ ರೂ. ಎಂ.ಎಲ್ಸಿ.ನಿಧಿಯಿಂದ 5 ಲಕ್ಷ ಅನುದಾನ ಸೇರಿಸಿ ಸುಂದರ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಕಾರ್ಯದರ್ಶಿ ಜಯರಾಮ್, ನೂತನ ಕಟ್ಟಡದ ನಿರ್ಮಾಣಕ್ಕೆ ಸಹಕರಿಸಿದ ಪುಷ್ಪರಾಜ್ ಚೌಟ, ಸನತ್ ಕುಮಾರ್ ರೈ, ಗಣೇಶ್ ಪೂಜಾರಿ ಬಂಟ್ರಿಂಜ,ಸುಜಾತ ಎ, ತಾರಾನಾಥ ಸಾಲಿಯಾನ್, ಪದ್ಮನಾಭ ಅರೆಬೆಟ್ಟು , ರಜತ್, ಅತೀಶ್, ಅಶ್ವಿನ್, ನಾಗೇಶ್, ಜಯರಾಮ ಆರಂಗಳ, ವಿಶ್ವನಾಥ್ ಬೈಲಮೂಲೆ, ನಾರಾಯಣ ನಾಯ್ಕ, ಅರುಂಧತಿ, ಕಿರಣ್ ಹೆಗ್ಡೆ, ಮೋನಪ್ಪ ಗೌಡ ತಾಳಿಪಡ್ಪು,ವಂದನಾ ಪ್ರಿಯ ಹಾಗೂ ಪಂಚಾಯತ್ ನಲ್ಲಿ ಸೇವೆ ಸಲ್ಲಿಸಿದ ಮಾಜಿ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು , ಮಾಜಿ ಸದಸ್ಯರುಗಳು, ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಅಧ್ಯಕ್ಷರು, ಸದಸ್ಯರುಗಳು, ಪಿಡಿಒ, ಕಾರ್ಯದರ್ಶಿ, ಪಂಚಾಯತ್ ಗೆ ಸಂಬಂಧಿಸಿದ ವಿವಿಧ ವಿಭಾಗಗಳ ಸಿಬ್ಬಂದಿ ವರ್ಗದವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಎ, ಉಪಾಧ್ಯಕ್ಷೆ ಸಂಧ್ಯಾ ಕೆ, ಬಂಟ್ವಾಳ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ. ಪೂಜಾರಿ, ತಾಲೂಕು ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್, ಬಂಟ್ವಾಳ ಉಪವಿಭಾಗದ ಸಹ ಕಾರ್ಯನಿರ್ವಾಹಕ ಇಂಜಿನಿಯರ್ ತಾರಾನಾಥ ಸಾಲಿಯಾನ್ ಪಿ, ಉಳ್ಳಾಲ್ತಿ ದೈವಸ್ಥಾನದ ಅರ್ಚಕರಾದ ಶ್ರೀಕಾಂತ್ ಬನ್ನಿಂತಾಯ, ನೇರಳಕಟ್ಟೆ ಸೇವಾ ಸಹಕಾರಿ ವ್ಯವಸಾಯ ಬ್ಯಾಂಕ್ ನ ನಿರ್ದೇಶಕರಾದ ಸನತ್ ಕುಮಾರ್ ರೈ ತುಂಬೆಕೋಡಿ, ಸದಸ್ಯರುಗಳಾದ ಪುರಂದರ ಗೌಡ ಟಿ, ಕುಸುಮಾಧರ ಗೌಡ ಟಿ, ರಶ್ಮಿ ಎನ್. ಎಸ್, ಶಶಿಕಲಾ ಪೂಜಾರಿ ಉಪಸ್ಥಿತರಿದ್ದರು.

ಅಭಿವೃದ್ಧಿ ಅಧಿಕಾರಿ ವಿಶ್ವನಾಥ ಬೈಲಮೂಲೆ ಸ್ವಾಗತಿಸಿ, ಪಂಚಾಯತ್ ಕಾರ್ಯದರ್ಶಿ ನಾರಾಯಣ ನಾಯ್ಕ ವಂದಿಸಿದರು. ವೆಂಕಟೇಶ ಮಾಸ್ತರ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿ, ನಿಕಟಪೂರ್ವ ಅಧ್ಯಕ್ಷ ಗಣೇಶ್ ಕುಮಾರ್ ಬಂಟ್ರಿಂಜ ಸಹಕರಿಸಿದರು.

Leave a Reply

Your email address will not be published. Required fields are marked *