Breaking
21 Mar 2026, Sat

ಮೊರಂತಬೆಟ್ಟಿನಲ್ಲಿ ಭಾರೀ ಅವಘಡ: ಕಾರಿಗೆ ಡಿಕ್ಕಿ ಹೊಡೆದು ಮನೆ ಮೇಲೆ ಉರುಳಿ ಬಿದ್ದ ಕ್ರೇನ್

ಮೂಡಬಿದಿರೆ: ಚಾಲಕನ ನಿಯಂತ್ರಣ ತಪ್ಪಿದ ಕ್ರೇನ್ ಕಾರಿಗೆ ಡಿಕ್ಕಿ ಹೊಡೆದು ಬಳಿಕ ಮನೆ ಮೇಲೆ ಉರುಳಿ ಬಿದ್ದ ಘಟನೆ ಕಲ್ಲಮುಂಡ್ಕೂರು ಗ್ರಾಮದ ಮೊರಂತಬೆಟ್ಟು ಬಳಿ ಇಂದು (ಡಿ. 5) ನಡೆದಿದೆ.

ಮುಲ್ಕಿ–ಮೂಡುಬಿದಿರೆ ರಾಜ್ಯ ಹೆದ್ದಾರಿಯ ತಿರುವಿನಲ್ಲಿ ಅತಿವೇಗದಲ್ಲಿ ಸಂಚರಿಸುತ್ತಿದ್ದ ಕ್ರೇನ್ ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ.

ಘಟನೆಯ ವೇಳೆ ಮನೆಮಂದಿ ಮನೆಯ ಮತ್ತೊಂದು ಭಾಗದಲ್ಲಿದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಆದರೆ ಮನೆ ಹಾನಿಗೊಂಡಿದೆ.

ಘಟನಾ ಸ್ಥಳಕ್ಕೆ ಮೂಡುಬಿದಿರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *