Breaking
23 Mar 2026, Mon

ಫೆ.15: ಶಂಕರಪುರದಲ್ಲಿ ಸಪ್ತಸ್ವರ ಕರೋಕೆ ಗಾಯನ ಸೀಸನ್–2 ಸ್ಪರ್ಧೆ

ಉಡುಪಿ: ಸರ್ವಕಲಾ ಸೇವಾ ಟ್ರಸ್ಟ್ (రి), ಶಂಕರಪುರ ಇದರ ಸಹಯೋಗದೊಂದಿಗೆ ಫೆಬ್ರವರಿ 15 ರಂದು ಸಪ್ತಸ್ವರ ಕರೋಕೆ ಗಾಯನ ಸೀಸನ್-2 ಸ್ಪರ್ಧೆಯು ರೋಟರಿ ಭವನ ಶಂಕರಪುರದಲ್ಲಿ ನಡೆಯಲಿದೆ.

ಈ ಗಾಯನದಲ್ಲಿ ಬೆಂಗಳೂರಿನ ಸಂಗೀತ ನಿರ್ದೇಶಕರು ಹಾಗೂ ಚಲನಚಿತ್ರ ನಿರ್ದೇಶಕರು ಲಯ ಕೋಕಿಲ ಅವರು ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಈ ಗಾಯನದ ಪ್ರವೇಶ ಶುಲ್ಕ ರೂ. 600 ಆಗಿದ್ದು ಹಾಡುದಾರರಿಗೆ ಒಂದು ಸೋಲೊ ಹಾಗೂ ಡ್ಯೂಯಲ್ ಗೀತೆಗೆ ಅವಕಾಶ ನೀಡಲಾಗುತ್ತದೆ. ಭಾಗವಹಿಸಿದ ಎಲ್ಲರಿಗೂ ಸ್ಮರಣಿಕೆ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕಾರ್ಯಕ್ರಮದ ನೇರ ಪ್ರಸಾರವು “ನಮ್ಮ ಉಡುಪಿ ಟಿವಿ” TV ವಾಹಿನಿಯಲ್ಲಿ ಪ್ರಸಾರವಾಗಲಿದೆ.

Leave a Reply

Your email address will not be published. Required fields are marked *