ಬೆಳ್ತಂಗಡಿ : ಸಿಡಿಲ ಬಡಿತಕ್ಕೆ ಮರವೊಂದು ಸಂಪೂರ್ಣವಾಗಿ ಹಾನಿಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಶಾಲಾ ಸಮೀಪದಲ್ಲಿ ಡಿ. 03ರಂದು ನಡೆದಿದೆ.

ಮಲ್ಲಜೆ ಎಂಬಲ್ಲಿ ಸಂಜೆ 5.30 ರ ಸುಮಾರಿಗೆ ಅಕೇಶಿಯ ಮರಕ್ಕೆ ಸಿಡಿಲು ಬಡಿದಿದ್ದು ಪರಿಣಾಮ ಮರದ ತೊಗಟೆ ಸೀಳಿ ಹೋಗಿ ಮರ ಪುಡಿ ಪುಡಿಯಾಗಿದೆ. ಅಲ್ಲದೆ ಮರದ ಸುತ್ತಲಿನ ಸುಮಾರು 50 ಅಡಿ ಮಣ್ಣು ಅಗೆದಂತೆ ಕಿತ್ತು ಹೋಗಿದೆ.
ಸದ್ಯ ಈ ಘಟನೆ ಶಾಲೆ ಬಿಟ್ಟ ನಂತರ ಸಂಭವಿಸಿದ್ದರಿಂದ ಭಾರೀ ದೊಡ್ಡ ಅನಾಹುತ ತಪ್ಪಿದಂತಾಗಿದೆ.






