ಮೂಡಬಿದಿರೆ: ತಾಲೂಕಿನ ಜೈನ್ ಪೇಟೆಯ ಹೋಟೆಲ್ ವೊಂದರ ಬಳಿ ನಿಲ್ಲಿಸಲಾಗಿದ್ದ ಮದುವೆ ಬಸ್ಸಿನೊಳಗೆ ಹೆಬ್ಬಾವೊಂದು ಪತ್ತೆಯಾದ ಘಟನೆ ಡಿ.2 ರಂದು ನಡೆದಿದೆ.

ಪುತ್ತೂರಿನಿಂದ ಹೆಬ್ರಿ ಕಡೆಗೆ ಹೋಗುತ್ತಿದ್ದ ಬಸ್, ಕಾಫಿ ವಿರಾಮಕ್ಕಾಗಿ ಹೋಟೆಲ್ ಬಳಿ ನಿಂತಿತ್ತು. ಪ್ರಯಾಣಿಕರು ಇಳಿದ ನಂತರ, ಚಾಲಕ ವಾಹನದೊಳಗೆ ಪರಿಶೀಲಿಸಿದಾಗ ಹೆಬ್ಬಾವು ಇರುವುದು ಕಂಡುಬಂದಿದೆ.

ತಕ್ಷಣವೇ ಸ್ಥಳೀಯರು ಉರಗ ರಕ್ಷಕರಿಗೆ ತಿಳಿಸಿದ್ದು, ಸ್ಥಳಕ್ಕೆ ಆಗಮಿಸಿದ ಪಡುಕೊಣಾಜೆಯ ಉರಗ ರಕ್ಷಕ ದಿನೇಶ್ ಅವರು ಹಾವನ್ನು ಸುರಕ್ಷಿತವಾಗಿ ಹಿಡಿದು ಸ್ಥಳಾಂತರಿಸಿದ್ದಾರೆ ಎಂದು ತಿಳಿದು ಬಂದಿದೆ.




