ಪುತ್ತೂರು: ನಗರದ ಪಡೀಲ್ ನ ಚಿಕನ್ ಸೆಂಟರೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ನಾಪತ್ತೆಯಾಗಿರುವ ಘಟನೆ ನಡೆದಿದೆ.
ನಾಪತ್ತೆಯಾದ ಯುವಕನನ್ನು ಬದ್ರುದ್ದೀನ್ ಡಿಕೆ (27)ಎಂದು ಗುರುತಿಸಲಾಗಿದೆ.

ಬದ್ರುದ್ದೀನ್ ಡಿಕೆ ಸುಮಾರು 8 ವರ್ಷಗಳಿಂದ ಚಿಕನ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದರು. ನ.29 ರಂದು ಎಂದಿನಂತೆ ಬೆಳಗ್ಗೆ ಕೆಲಸಕ್ಕೆ ಹಾಜರಾಗಿದ್ದು, ಬಳಿಕ ಮಾಲಕರಿಗೆ ತಿಳಿಸಿ ಅಂಗಡಿಯಿಂದ ಹೊರಟ ಬಳಿಕ ಮರಳಿ ಕೆಲಸದ ಸ್ಥಳಕ್ಕೂ ಹೋಗದೇ, ಮನೆಗೂ ಬಾರದೆ ಕಾಣೆಯಾಗಿರುವುದು ತಿಳಿದುಬಂದಿದೆ.
ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ.




