Breaking
19 Sep 2026, Sat

ಕಕ್ಯಪದವಿನಲ್ಲಿ ‘ಸತ್ಯ-ಧರ್ಮ’ ಜೋಡುಕರೆ ಕಂಬಳ: ಕಂಬಳ ಓಟಗಾರ ಸತೀಶ್ ದೇವಾಡಿಗ ಅಳದಂಗಡಿ ಅವರಿಗೆ ಸನ್ಮಾನ

ಬಂಟ್ವಾಳ : ತಾಲೂಕಿನ ಕಕ್ಯಪದವು ಮೈರ ಎಂಬಲ್ಲಿ ‘ಸತ್ಯ-ಧರ್ಮ’ ಜೋಡುಕರೆ ಕಂಬಳವು ನ. 29 ರಂದು ನಡೆಯಿತು.

ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಂಬಳ ಓಟಗಾರ ಸತೀಶ್ ದೇವಾಡಿಗ ಅಳದಂಗಡಿ ಇವರನ್ನು ಸನ್ಮಾನಿಸಿ ಬಳಿಕ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಕಂಬಳ ಕೂಟ ಆಯೋಜನೆ ಜೊತೆಗೆ ಕಂಬಳ ಕ್ಷೇತ್ರದ ಸಾಧಕರನ್ನು ಗುರುತಿಸಿ ಅಭಿನಂದಿಸುವ ಮಹತ್ಕಾರ್ಯ ಶ್ಲಾಘನೀಯ ಎಂದರು.

ಕಂಬಳ ಸಮಿತಿ ಅಧ್ಯಕ್ಷ ಸುದರ್ಶನ್ ಬಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಶಶಿಧರ್ ಶೆಟ್ಟಿ ಬರೋಡ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ. ತುಂಗಪ್ಪ ಬಂಗೇರ, ಬಿಜೆಪಿ ಮುಖಂಡ ರಾಮದಾಸ್ ಬಂಟ್ವಾಳ, ಪ್ರಮುಖರಾದ ನಾರಾಯಣ ಪೂಜಾರಿ ಬೊಳ್ಳುಕಲ್ಲು, ಪ್ರಕಾಶ್ ಅಂಚನ್, ಗಣೇಶ್ ರೈ ಮಾಣಿ, ಸುಕೇಶ್ ಚೌಟ, ಸಚಿನ್ ಅಡಪ, ನಂದರಾಮ ರೈ, ಪುರುಷೋತ್ತಮ ಶೆಟ್ಟಿ, ಸತೀಶ್ ಪೂಜಾರಿ ಪಾನೇಲ, ಜಿಲ್ಲಾ ತೀರ್ಪುಗಾರ ಎಡ್ತೂರು ರಾಜೀವ್ ಶೆಟ್ಟಿ, ವಕೀಲ ರಂಜಿತ್ ಮೈರ, ಸುರೇಶ ಮೈರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಶಿವಾನಂದ ಮೈರ ಸ್ವಾಗತಿಸಿ ವಂದಿಸಿದರು.

Leave a Reply

Your email address will not be published. Required fields are marked *