Breaking
23 Mar 2026, Mon

ವೀರಕಂಭದ ಬೊನ್ಯಕುಕ್ಕು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

ಕಲ್ಲಡ್ಕ: ಮಕ್ಕಳ ಕಾಳಜಿಯ ಜೊತೆ ಪೋಷಕರ ಜವಾಬ್ದಾರಿ ಬಹಳ ಪ್ರಾಮುಖ್ಯತೆ ವಹಿಸುತ್ತದೆ. ಮಕ್ಕಳ ಚಲನ ವಲನಗಳನ್ನು ಪ್ರತಿದಿನ ಗಮನಿಸುತ್ತಾ ಮಕ್ಕಳನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಪೋಷಕರ ಜವಾಬ್ದಾರಿ ಬಹಳ ಇದೆ ಎಂದು ಬಂಟ್ವಾಳ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ವಿದ್ಯಾ ಹೇಳಿದರು.

ಅವರು ನ. 19ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಟ್ಲ, ಬಾಲವಿಕಾಸ ಸಮಿತಿ ಬೊನ್ಯಕುಕ್ಕು ಅಂಗನವಾಡಿ ಕೇಂದ್ರ ವತಿಯಿಂದ ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಬೊನ್ಯಕುಕ್ಕು ಅಂಗನವಾಡಿ ಕೇಂದ್ರದಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಕಮರುನ್ನೀಸಾ ವಹಿಸಿದ್ದರು.

ಮಕ್ಕಳ ದಿನಾಚರಣೆ ಪ್ರಯುಕ್ತ ಏಪ೯ಡಿಸಲಾಗಿದ್ದ ವಿವಿಧ ಸ್ಪರ್ಧೆಯ ಬಹುಮಾನವನ್ನು ವಿತರಿಸಲಾಯಿತು. ಬಳಿಕ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಪ್ರದಶ೯ನಗೊಂಡಿತು.

ವೇದಿಕೆಯಲ್ಲಿ ವೀರಕಂಭ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಪೂಜಾರಿ ಗೊಳಿಮಾರ್, ಪಂಚಾಯತ್ ಸದಸ್ಯರಾದ ಉಮಾವತಿ, ಸಂಜೀವಿನಿ ಒಕ್ಕೂಟ ಎಮ್ ಬಿ ಕೆ ಮಲ್ಲಿಕಾ, ಎಲ್ ಸಿ ಆರ್ ಪಿ ಜಯಂತಿ, ಆಶಾ ಕಾರ್ಯಕರ್ತೆ ಮೋಹಿನಿ, ಕೃಷಿ ಸಖಿ ನಮಿತಾ, ಚೇತನ ಗೋಲಿಮಾರು, ಚಿನ್ನಾ ಕಲ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಬಾಲ ವಿಕಾಸ ಸಮಿತಿ ಸದಸ್ಯರು, ಮಕ್ಕಳ ಪೋಷಕರು, ಸೂರ್ಯ ಸ್ತ್ರೀ ಶಕ್ತಿ ಸಂಘದ ಸದಸ್ಯರು ಪಾಲ್ಗೊಂಡಿದ್ದರು.

ಕೂಡಪದವು ಶಾಲಾ ಗೌರವ ಶಿಕ್ಷಕಿ ಶ್ವೇತ ಸ್ವಾಗತಿಸಿ, ಅಂಗನವಾಡಿ ಕಾರ್ಯಕರ್ತೆ ಶಶಿಕಲಾ ವಂದಿಸಿದರು. ಅಂಗನವಾಡಿ ಸಹಾಯಕಿ ಸವಿತಾ ಕೆ ಸಹಕರಿಸಿದರು.

Leave a Reply

Your email address will not be published. Required fields are marked *