Breaking
23 Mar 2026, Mon

ಸ್ಕೂಟರಿನಲ್ಲಿ ಎಂಡಿಎಂಎ ಸಾಗಿಸುತ್ತಿದ್ದ ಪ್ರಕರಣ: ಆರೋಪಿಗೆ 2ವಷ೯ ಕಠಿಣ ಸಜೆ, 20 ಸಾವಿರ ರೂ. ದಂಡ

ಕಾಸರಗೋಡು: ಸ್ಕೂಟರಿನಲ್ಲಿ 3.29 ಗ್ರಾಂ ಎಂಡಿಎಂಎ ಸಾಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ನ್ಯಾಯಾಲಯವು ಎರಡು ವರ್ಷ ಕಠಿಣ ಸಜೆ ಹಾಗೂ 20 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದೆ.

ಚೆರ್ವತ್ತೂರು ಮೈಲಾಟ್ಟಿ ಕುನ್ನು ನಿವಾಸಿ ಎಂ.ಕೆ.ಮುಹಮ್ಮದ್ ನಿಯಾಸ್(34) ಗೆ ಕಾಸರಗೋಡು ನ್ಯಾಯಾಲಯ ಈ ಶಿಕ್ಷೆ ನೀಡಿದ್ದು, ದಂಡ ಪಾವತಿಸದಿದ್ದರೆ 3 ತಿಂಗಳು ಹೆಚ್ಚುವರಿ ಸಜೆ ಅನುಭವಿಸಬೇಕು ಎಂದು ಎಚ್ಚರಿಕೆ ನೀಡಿದೆ.

2021 ಡಿ. 24 ರಂದು ಮಧ್ಯಾಹ್ನ 2.30 ಕ್ಕೆ ಚೆರ್ವತ್ತೂರು ಕೈದಕ್ಕಾಡ್ ಎಂಬಲ್ಲಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಎಂಡಿಎಂಎ ವಶಪಡಿಸಲಾಗಿತ್ತು ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *