ಕೇರಳ: ಶಾಲಾ ವಾಹನ ಹಿಂದಕ್ಕೆ ಚಲಿಸುವ ವೇಳೆ ಡಿಕ್ಕಿಯಾಗಿ ವಿದ್ಯಾರ್ಥಿಯೋವ೯ ಮೃತಪಟ್ಟ ಘಟನೆ ಕೇರಳದ ಇಡುಕ್ಕಿಯಲ್ಲಿ ನ.19ರಂದು ನಡೆದಿದೆ.
ಹೆಯ್ಸಲ್ ಬೆನ್ ಮೃತಪಟ್ಟ ವಿದ್ಯಾರ್ಥಿ.

ಇಡುಕ್ಕಿ ಚೆರುತೋಣಿ ಗಿರಿಜ್ಯೋತಿ ಪಬ್ಲಿಕ್ ಶಾಲೆಯ ಅಂಗಳದಲ್ಲಿ ಇ೦ದು ಬೆಳಗ್ಗೆ, ಶಾಲಾ ವಾಹನ ಮಕ್ಕಳನ್ನು ಇಳಿಸಿ ಹಿಂದಕ್ಕೆ ಚಲಿಸುವಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಈ ವೇಳೆ ಇನ್ನೋರ್ವ ಮಗುವಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.





