Breaking
26 Sep 2026, Sat

ಸಜೀಪದ ಶ್ರೀ ಕೃಷ್ಣ ಶಿಶು ಮಂದಿರದಲ್ಲಿ ಕೆನರಾ ಬ್ಯಾಂಕ್ ವತಿಯಿಂದ ನಿರ್ಮಾಣಗೊಂಡ ಕಟ್ಟಡ ಉದ್ಘಾಟನಾ ಸಮಾರಂಭ

ಬಂಟ್ವಾಳ: ಸಜೀಪಮೂಡದ ಕಂದೂರಿನ ಶ್ರೀ ಕೃಷ್ಣ ಶಿಶು ಮಂದಿರದಲ್ಲಿ ಕೆನರಾ ಬ್ಯಾಂಕ್ ವತಿಯಿಂದ ಎರಡು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಕಟ್ಟಡ ಉದ್ಘಾಟನಾ ಸಮಾರಂಭವು ಶಿಶುಮಂದಿರ ಅಧ್ಯಕ್ಷ ಸುರೇಶ್ ಪೂಜಾರಿ ಸಾರ್ತಾವು ಅಧ್ಯಕ್ಷತೆಯಲ್ಲಿ ಜರಗಿತು.

ಸಮಾರಂಭದಲ್ಲಿ ಮಾತನಾಡಿದ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಅವರು ಸರ್ವರ ಸಹಕಾರದಿಂದ ಶಿಶುಮಂದಿರ ಅಭಿವೃದ್ಧಿ ಹೊಂದಲಿ ಎಂಬುದಾಗಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಜಿಎಂ ಬಿಂದು, ಸೀನಿಯರ್ ಮ್ಯಾನೇಜರ್ ರಮೇಶ್ ನಾಯಕ್, ಬೋಳಿ ಯಾರುಶಾಖೆ ಮ್ಯಾನೇಜರ್ ಆಕಾಶ್, ಬ್ಯಾಂಕ್ ಅಧಿಕಾರಿಗಳಾದ ತುಷಾ0ತ, ಲತೀಶ್ ಹಾಗೂ ಶ್ರೀರಾಮ ವಿದ್ಯಾ ಕೇಂದ್ರ ಸಂಚಾಬಕ ಮಾಧವ ಸಮಿತಿ ಸದಸ್ಯರಾದ ಟಿ ಸುಬ್ರಾಯ ತಿ ಸುಬ್ರಾಯ ಕಾರ0ತ ಸುರೇಶ್ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *