Breaking
21 Sep 2026, Mon

ರಸ್ತೆ ಅಪಘಾತದಲ್ಲಿ ಮುಲ್ಕಿ ಬಪ್ಪನಾಡು ದೇವಸ್ಥಾನದ ಸಿಬ್ಬಂದಿ ಸಾವು

ಮುಲ್ಕಿ : ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಮಂಗಳೂರು ಹೊರವಲಯದ ಮುಲ್ಕಿಯಲ್ಲಿ ನ. 16ರಂದು ನಡೆದಿದೆ.

ಮೃತರನ್ನು ಪಂಚಮಹಲ್ ಅಗ್ರಹಾರದ ನಿವಾಸಿ, ಬಪ್ಪನಾಡು ದೇವಸ್ಥಾನದ ಸಿಬ್ಬಂದಿಯಾಗಿರುವ ಉಮೇಶ್ ದೇವಾಡಿಗ (66)ಎಂದು ಗುರುತಿಸಲಾಗಿದೆ.

ಇವರು ನ.2ರಂದು ದೇವಸ್ಥಾನದಿಂದ ಕೆಲಸ ಮುಗಿಸಿಕೊಂಡು ಮನೆಯತ್ತ ಹೋಗುವಾಗ ಹೆದ್ದಾರಿಯಲ್ಲಿ ಲಾರಿ ಢಿಕ್ಕಿಯಾಗಿತ್ತು. ಹಲವು ವರ್ಷಗಳಿಂದ ಬಪ್ಪನಾಡು ದೇವಸ್ಥಾನದಲ್ಲಿ ಕೆಲಸ ಮಾಡಿಕೊಂಡಿದ್ದು ನಿವೃತ್ತಿಯ ಅನಂತರ ತಾತ್ಕಾಲಿಕ ಕೆಲಸಗಾರನಾಗಿ ಮುಂದುವರಿದಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *