Breaking
21 Mar 2026, Sat

ಫುಟ್ ಬಾಲ್ ತಂಡದ ಸದಸ್ಯರ ನಡುವೆ ಜಗಳ: ರಾಜಿಸಂದಾನದ ವೇಳೆ ಚೂರಿ ಇರಿತ

ಕೇರಳ: ಫುಟ್ ಬಾಲ್ ತಂಡದ ಸದಸ್ಯರ ನಡುವೆ ಉಂಟಾಗಿದ್ದ ಜಗಳವನ್ನು ರಾಜಿಸಂದಾನದ ಮೂಲಕ
ಸರಿಪಡಿಸಲು ಬಂದ ಯುವಕನಿಗೆ ಚೂರಿ ಇರಿದ ಘಟನೆ ನ. 17 ರಂದು ತಿರುವನಂತಪುರಂನಲ್ಲಿ ನಡೆದಿದೆ.

ರಾಜಾಜಿನಗರ ನಿವಾಸಿ ಅಲನ್(19) ಮೃತಪಟ್ಟ ಯುವಕ. ಘಟನೆಗೆ ಸಂಬಂಧಪಟ್ಟಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜಗದಿ ಕಾಲನಿ – ಚೆಂಗಲ್ ಚೂಳ ಎಂಬ ಫುಟ್ ಬಾಲ್ ತಂಡದ ಸದಸ್ಯರೊಳಗೆ ಜಗಳ ಉಂಟಾಗಿತ್ತು. ಈ ಹಿನ್ನೆಲೆ ಸುಮಾರು 30 ರಷ್ಟು ಮ೦ದಿ ಸೇರಿ ರಾಜಿಸಂದಾನಕ್ಕೆ ಮುಂದಾಗಿದ್ದರು. ಈ ವೇಳೆ ಅಲನ್ ಎಂಬಾತನಿಗೆ ಓರ್ವ ಚೂರಿಯಿಂದ ಇರಿದಿದ್ದಾನೆ ಎನ್ನಲಾಗಿದೆ.

ಗಂಭೀರ ಗಾಯಗೊಂಡ ಅಲನ್ ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *