ಸುಳ್ಯ: ರೇಬಿಸ್ ಕಾಯಿಲೆಗೆ ತುತ್ತಾಗಿ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ನ. 14 ರಂದು ಸಂಪಾಜೆ ಗ್ರಾಮದ ನೆಲ್ಲಿ ಕುಮೇರಿನಲ್ಲಿ ನಡೆದಿದೆ.
ಮೃತಪಟ್ಟ ಮಹಿಳೆಯನ್ನು ಕಲ್ಲುಗುಂಡಿಯ ನೆಲ್ಲಿ ಕುಮೇರಿನ ಕುಂಬೆ (57 ವರ್ಷ) ಎಂದು ಗುರುತಿಸಲಾಗಿದೆ.

ಕೆಲವು ದಿನಗಳ ಹಿಂದೆ ಕೆಲಸಕ್ಕೆ ಹೋಗುವ ವೇಳೆ ನಾಯಿ ಕಚ್ಚಿತ್ತು. ಆದರೆ ಇದನ್ನು ಮನೆಯವರಿಗೆ ತಿಳಿಸದೇ ಟಿಟಿ ಇಂಜೆಕ್ಷನ್ ಮಾತ್ರ ಚುಚ್ಚಿಸಿಕೊಂಡಿರುವುದು ತಿಳಿದುಬಂದಿದೆ. ಸುಮಾರು 40 ದಿನಗಳ ಬಳಿಕ ರೇಬಿಸ್‌ನ ಲಕ್ಷಣಗಳು ಕಾಣಿಸಿಕೊಂಡ ಪರಿಣಾಮ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.
ಮೃತರು ಮಕ್ಕಳನ್ನು ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.




