ದುಬೈ: ಕಟ್ಟಡದ ಮೇಲೆ ನಿಂತು ವಿಮಾನದ ಪೋಟೋ ತೆಗೆಯಲು ಹೋದ ಯುವಕನೊಬ್ಬ ಆಯತಪ್ಪಿ ಕೆಳಗೆ ಬಿದ್ದು ಸಾವನಪ್ಪಿದ ಘಟನೆ ದುಬೈನಲ್ಲಿ ನಡೆದಿದೆ.
ಮೃತರನ್ನು ಕೇರಳದ ಕೋಝಿಕ್ಕೋಡ್‌ನ ವೆಲ್ಲಿಪರಂಬ ನಿವಾಸಿ ಮೊಹಮ್ಮದ್ ಮಿಶಾಲ್ (19) ಎಂದು ಗುರುತಿಸಲಾಗಿದೆ.

ಮೊಹಮ್ಮದ್ ಮಿಶಾಲ್ ಟೂರಿಸ್ಟ್ ವಿಸಾದಲ್ಲಿ ದುಬೈಗೆ ತೆರಳಿದ್ದು, ಸುಮಾರು ಎರಡು ವಾರಗಳ ಕಾಲ ತಮ್ಮ ಸೋದರ ಸಂಬಂಧಿಗಳೊಂದಿಗೆ ವಾಸಿಸುತ್ತಿದ್ದರು.
ಮಿಶಾಲ್ ವಿಮಾನದ ಹತ್ತಿರದ ಚಿತ್ರಗಳನ್ನು ಸೆರೆಹಿಡಿಯಲು ಪ್ರಯತ್ನಿಸುವಾಗ ಸಮತೋಲನ ಕಳೆದುಕೊಂಡು ಕಟ್ಟಡದಿಂದ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ. ಈ ವೇಳೆ ಗಂಭೀರ ಗಾಯಗೊಂಡ ಮಿಶಾಲ್ ನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ತಂದೆ, ತಾಯಿ ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.




