Breaking
26 Sep 2026, Sat

ಪಣಪಿಲದ 16 ನೇ ವರ್ಷದ ಜಯ-ವಿಜಯ ಹೊನಲು ಬೆಳಕಿನ ಜೋಡುಕರೆ ಕಂಬಳಕ್ಕೆ ಚಾಲನೆ

ಮೂಡುಬಿದಿರೆ: ತಾಲೂಕಿನ ಪಣಪಿಲದ 16 ನೇ ವರ್ಷದ ಜಯ-ವಿಜಯ ಹೊನಲು ಬೆಳಕಿನ ಜೋಡುಕರೆ ಕಂಬಳಕ್ಕೆ ನ. 15ರಂದು ಬೆಳಿಗ್ಗೆ ಚಾಲನೆ ನೀಡಲಾಯಿತು.

ಶಾಸಕ ಉಮಾನಾಥ ಕೋಟ್ಯಾನ್ ಅವರು ಕಂಬಳವನ್ನು ಉದ್ಘಾಟಿಸಿದರು.

ಕಂಬಳ ಸಮಿತಿಯ ಅಧ್ಯಕ್ಷರಾದ ನಂದೊಟ್ಟು ಪಣಪಿಲ ಯುವರಾಜ್ ಜೈನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಉದ್ಯಮಿ, ಅಸ್ತ್ರ ಗ್ರೂಪ್ ನ ಲಾಂಚುಲಾಲ್ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪಣಪಿಲ ಅರಮನೆಯ ವಿಮಲ್ ಕುಮಾರ್ ಶೆಟ್ಟಿ, ದರೆಗುಡ್ಡೆ ಪಂಚಾಯತ್ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು, ಮುರಳೀಕೃಷ್ಣ ಭಟ್ ಪಿದಮಲೆ, ಹೇಮಾ ಕೆ.ಪೂಜಾರಿ, ಗುಣಪಾಲ ಕಡಂಬ, ರಂಜಿತ್ ಪೂಜಾರಿ, ವಿಜಯ ಕುಮಾರ್ ಕಂಗಿನಮನೆ, ಪ್ರವೀಣ್ ಭಟ್ ಕಾನಂಗಿ,ಪ್ರದೀಪ್ ವಾಲ್ಪಾಡಿ, ಕಂಬಳ ಸಮಿತಿಯ ಕಾರ್ಯಾಧ್ಯಕ್ಷರಾದ ಸುಭಾಶ್ಚಂದ್ರ ಚೌಟ, ಉಪಾಧ್ಯಕ್ಷರಾದ ಮುನಿರಾಜ್ ಹೆಗ್ಡೆ, ರಮಾನಾಥ ಸಾಲ್ಯಾನ್, ರವಿ ಪೂಜಾರಿ, ಪ್ರವೀಣ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಕೆ. ಅಶ್ವಥ್ ಪಣಪಿಲ, ಜೊತೆ ಕಾರ್ಯದರ್ಶಿಗಳಾದ ಯೋಗೀಶ್ ನಂದೊಟ್ಟು, ದೀಕ್ಷಿತ್ ಪಣಪಿಲ, ಕೋಶಾಧಿಕಾರಿ ಜಯಚಂದ್ರ ಎನ್. ಸತೀಶ್ ನಾರಾವಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *