Breaking
26 Jun 2026, Fri

ಕಣಿಯೂರಿನ ಪುಟ್ಟ ಮಕ್ಕಳಲ್ಲಿ ಕೃಷಿ ಪ್ರೇಮ ಬೆಳೆಸಿದ ಬಾಲ್ಯದ ಆಟ

ಬಂಟ್ವಾಳ : ತಾಲೂಕಿನ ಕನ್ಯಾನ ಗ್ರಾಮದ ಕಣಿಯೂರು ನಾಲ್ಕು ಮಂದಿ ಮಕ್ಕಳು ಭತ್ತದ ಕೃಷಿ ಮಾಡುವ ಮೂಲಕ ಇಂದಿನ ಯುವಜನತೆಗೆ ಮಾದರಿಯಾಗಿದ್ದಾರೆ.

ಹೌದು ಧನ್ವಿನ್, ವೇದಾ0ತ್, ಹಾರ್ಧಿಕ್, ಹರ್ಷಿಕಾ ಎಂಬವರೇ ಭತ್ತದ ಕೃಷಿ ಕಾಂತ್ರಿ ಮಾಡಿ ಮಕ್ಕಳಾಗಿದ್ದಾರೆ. ಇವರಲ್ಲಿ ಧನ್ವಿನ್ ಶ್ರೀ ಗುರುದೇವ ಶಿಕ್ಷಣ ಸಂಸ್ಥೆ ಒಡಿಯೂರು, ವೇದಾಂತ್ ಮತ್ತು ಹಾರ್ಧಿಕ್ ಶ್ರೀ ಸರಸ್ವತಿ ವಿದ್ಯಾಲಯ ಕನ್ಯಾನ, ಹಾಗೂ ಹರ್ಷಿಕಾ ಸೈ0ಟ್ ರೀಟಾ ಶಿಕ್ಷಣ ಸಂಸ್ಥೆ ವಿಟ್ಲ ಇಲ್ಲಿನ ವಿದ್ಯಾರ್ಥಿಗಳಾಗಿದ್ದಾರೆ.ಈ ಮಕ್ಕಳಿಗೆ ಮಳೆಗಾಲ ಬಂತೆಂದರೆ ನೀರಿನ ಹರಿಯುವ ಭಾಗದಲ್ಲಿ ಗುಂಡಿ ತೋಡಿ ಗಿಡ ನೆಡುವುದೇ ಆಟವಾಗಿತ್ತು. ಹೀಗೆ ಆಟ ಆಡ್ತಾ ಇದ್ದ ಮಕ್ಕಳು ಕಳೆದ ಬಾರಿಯ ಮಳೆಗಾಲದಲ್ಲಿ ನಾವು ಭತ್ತ ಬೆಳೆಯಬೇಕು ಎಂಬ ಆಲೋಚನೆಯನ್ನು ಮಾಡುತ್ತಾರೆ.

ಇದಕ್ಕೆ ಮೊದಲಿಗನಾಗಿ ನಿಂತವನು ಧನ್ವಿನ್ ಎಂಬ ಹುಡುಗ. ಇವನ ಮಾವ ಹಿರಿಯರಾದ ವಾಮನ ಪೂಜಾರಿಯವರು ಈ ನಾಲ್ವರು ಮಕ್ಕಳಿಗೆ ಬೆಂಬಲವಾಗಿ ನಿಲ್ಲುತ್ತಾರೆ. ಪ್ರಾಯೋಗಿಕವಾಗಿ ಕ್ಷೇತ್ರದ ಎದುರು ಭಾಗದಲ್ಲಿ ಒಂದು ಹಿಡಿ ಬೀಜ ಬಿತ್ತಿದ ಮಕ್ಕಳು ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತೆನೆ ದಿನದಂದು ಈ ಮಕ್ಕಳು ತಾವು ಬೆಳೆಸಿದ ಭತ್ತದ ಒಂದು ಹಿಡಿ ತೆನೆಯನ್ನು ಬಹಳ ಖುಷಿಯಿಂದ ದೇವಿಗೆ ಸಮರ್ಪಿಸಿದರು.ಮಕ್ಕಳ ಈ ಕಾರ್ಯಕ್ಕೆ ಮೆಚ್ಚಿದ ಕ್ಷೇತ್ರದ ಮಹಾಭಲೇಶ್ವರ ಸ್ವಾಮೀಜಿಯವರು ಕೃಷಿ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡುವಂತೆ ಪ್ರೇರಪಿಸುತ್ತಾರೆ. ಇದರಿಂದ ಉತ್ಸಾಹಗೊಂಡ ಮಕ್ಕಳು ಈ ಬಾರಿಯೂ ತಾವು ಭತ್ತ ಬೆಳೆಯೋಣ ಎಂದು ಮಾತಾಡಿಕೊಂಡು ಕಳೆದ ಬಾರಿಗಿಂತ ಸ್ವಲ್ಪ್ ಜಾಸ್ತಿ ಬೀಜ ಬಿತ್ತಿದರು. ಜಡಿಮಳೆಯಲ್ಲೂ ಪ್ರತೀ ದಿನ ಅದನ್ನು ವೀಕ್ಷಿಸುತ್ತಾ, ಸಂಭ್ರಮ ಪಟ್ಟರು.ಕೊನೆಗೆ ಮಕ್ಕಳ ಆಸೆಯಂತೆ ಪೈರು ತುಂಬಿ ಕಟಾವಿಗೆ ಸಿದ್ದವಾಗಿತ್ತು. ಮಕ್ಕಳೆಲ್ಲ ಬಹಳ ಸಂಭ್ರಮದಿಂದ ಪೈರು ಕಟಾವಿನಲ್ಲಿ ಭಾಗಿಯಾದರು.

ಅನ್ನಪೂರ್ಣೇಶ್ವರಿಯ ನೆಲೆ ಎಲ್ಲಿ ಇರುತ್ತದೋ ಆ ಜಾಗ ಬರಡು ಬೂಮಿ ಆಗಿದ್ದರೂ, ಹಸಿರಿಂದ ಕಂಗೊಳಿಸುವಂತೆ ಮಾಡುವ ಶಕ್ತಿ ಆ ಅಮ್ಮನಿಗೆ ಇದೆ ಎನ್ನುವುದಕ್ಕೆ ಮಕ್ಕಳ ಮೂಲಕ ಸಾಕ್ಷಿ ನೀಡಿದ್ದಾಳೆ ತಾಯಿ. ಮಕ್ಕಳ ಪ್ರತೀ ಚಟುವಟಿಕೆಯಲ್ಲಿ ಮನೆಯ ವರ ಪ್ರೋತ್ಸಾಹವು ಇತ್ತು. ಮುಂದಿನ ಬಾರಿಗೆ ಬೀಜಕ್ಕಾಗಿ ಈ ಭತ್ತವನ್ನು ಸಂಗ್ರಹಿಸಿಟ್ಟು ಇದಕ್ಕಿಂತಲೂ ಹೆಚ್ಚಿನ ಪ್ರಮಾಣದ ಬೆಳೆ ತೆಗೆಯುವ ಯೋಜನೆಯಲ್ಲಿದ್ದಾರೆ ಈ ಮಕ್ಕಳು.

Leave a Reply

Your email address will not be published. Required fields are marked *