ಬಂಟ್ವಾಳ: ಅತಿವೃಷ್ಟಿ, ಅನಾವ್ರಷ್ಟಿ ಹಾಗೂ ನಿರಂತರ ಮಳೆಯಿಂದಾಗಿ ಕೃಷಿಕರ ಅಡಿಕೆ ಬೆಳೆ ಮತ್ತು ಕರೀಮೆಣಸು ಬೆಳೆಗಳು ವಿವಿಧ ರೋಗಗಳಿಂದ ಬಾಧಿತವಾಗಿ ರೈತರಿಗೆ ನಷ್ಟ ಉಂಟಾದಾಗ ರೈತರಿಗೆ ಪರಿಹಾರ ನೀಡಿ ಕೃಷಿಕರ ಬಾಳಿಗೆ ವರದಾನ ವಾಗಿರುವ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ಗರಿಷ್ಠ ಪರಿಹಾರವು ರೈತರಿಗೆ ದೊರಕಿಸುವಲ್ಲಿ ಕೃಷಿ ಇಲಾಖೆ ಯಿಂದ ನಿಯೋಜಸಲ್ಪಟ್ಟ ಬೆಳೆ ಸಮೀಕ್ಷೆ ಖಾಸಗಿ ನಿವಾಸಿಗಳ ಪಾತ್ರವೂ ಪ್ರಮುಖವಾಗಿದೆ ಎಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ಬಿ. ಕೃಷ್ಣ ರೈ ರೈತ ಸಭಾಂಗಣದಲ್ಲಿ ನಡೆದ ಸಂಘದ ವ್ಯಾಪ್ತಿಯ ಒಳಪಟ್ಟ ಗ್ರಾಮಗಳ, ಬೆಳೆ ಸಮೀಕ್ಷೆ ಖಾಸಗಿ ನಿವಾಸಿಗಳನ್ನು ಗೌರವಿಸಿ ಮಾತನಾಡಿದರು.
ಕೆಲವೊಂದು ರೈತರು ತಾವೂ ಹೊಂದಿರುವ ಜಮೀನಿನಲ್ಲಿರುವ ಬೆಳೆ ಸಮೀಕ್ಷೆ ಯನ್ನು ತಾವೇ ಮಾಡುತ್ತಿದ್ದು ಬಹುತೇಕ ರೈತರ ಬೆಳೆ ಸಮೀಕ್ಷೆಯನ್ನು ಕೃಷಿ ಇಲಾಖೆಯಿಂದ ಗುರುತಿಸಿಕೊಂಡಿರುವ ಗ್ರಾಮ ಖಾಸಗಿ ನಿವಾಸಿಗಳು ರೈತರ ತೋಟಗಳಿಗೆ ಹೋಗಿ ಬೆಳೆ ಸಮೀಕ್ಷೆ ಮಾಡಿರುವುದರಿಂದ ಕರಾವಳಿ ಜೆಲ್ಲೆಗಳಲ್ಲಿ ದಾಖಲೆ ಪ್ರಮಾಣದಲ್ಲಿ ರೈತರಿಗೆ ಬೆಳೆ ವಿಮೆ ಪರಿಹಾರ ಬರುತ್ತಿದೆ ಎಂದರು.

ಈ ನಿಟ್ಟಿನಲ್ಲಿ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಗರಿಷ್ಠ ಪ್ರಮಾಣದಲ್ಲಿ ರೈತರ ಬೆಳೆ ಸಮೀಕ್ಷೆ ಮಾಡಿಸಿ ಹವಾಮಾನ ಆಧಾರಿತ ಬೆಳೆ ವಿಮೆಗೆ ನೋಂದಾಯಿಸಿ ಸಂಘದ ವ್ಯಾಪ್ತಿಯ ರೈತರಿಗೆ ವಾರ್ಷಿಕ ಕೋಟಿಗಟ್ಟಲೆ ಪರಿಹಾರ ದೊರಕುತ್ತಿದ್ದು 2025-26 ನೇ ಸಾಲಿನಲ್ಲಿ 1855 ರೈತರು 2396 ಎಕ್ರೆಗಳಿಗೆ 63 ಲಕ್ಷ ಪ್ರಿಮಿಯಂ ಪಾವತಿ ಯಾಗಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಸಂದೇಶ ಶೆಟ್ಟಿ, ನಿರ್ದೇಶಕರುಗಳಾದ ಸತೀಶ್ ಪೂಜಾರಿ ದಿನೇಶ್ ಪೂಜಾರಿ, ರಶ್ಮಿತ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ವಿಶ್ವನಾಥ ಶೆಟ್ಟಿಗಾರ್, ವೀರಪ್ಪ ಪರವ, ಜಾರಪ್ಪ ನಾಯ್ಕ, ಶಿವ ಗೌಡ , ಪುಷ್ಪಲತಾ ಎಸ್. ಆರ್, ,ವೃತ್ತಿಪರ ನಿರ್ದೇಶಕರಾದ ರಾಜೇಶ್ ಶೆಟ್ಟಿ, ನವೀನ ಹೆಗ್ಡೆ ಬೆಳೆ ಸಮೀಕ್ಷೆ ಗ್ರಾಮ ನಿವಾಸಿಗಳಾದ ಕಾರ್ತಿಕ್ ನಾಯಕ್ , ಪೂಜಾ, ಭವ್ಯ ಶೋಭಾ, ನಮಿತಾ ಅಕ್ಷತಾ, ಲಕ್ಷ್ಮಿ, ಭಾರತಿ ಶೆಟ್ಟಿ, ಹೇಮಾವತಿ, ಪುಷ್ಪ ಉಪಸ್ಥಿತರಿದ್ದರು.
ಸಂಘದ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಆರತಿ ಶೆಟ್ಟಿ ಸ್ವಾಗತಿಸಿ, ಸಂಘದ ಸಿಬ್ಬಂದಿ ಸುಭಾಸ್ ಬಂಗೇರ ಕಾರ್ಯಕ್ರಮ ನಿರ್ವಹಿಸಿ ನಿರ್ದೇಶಕಿ ಮಂದಾರತಿ ಎಸ್ ಶೆಟ್ಟಿ ಧನ್ಯವಾದವಿತ್ತರು.



