Breaking
23 Dec 2024, Mon

2026 ರ ಚುನಾವಣೆಯಲ್ಲಿ ಬಹುದೊಡ್ಡ ಪಕ್ಷವಾಗಿ ಗೆಲ್ತೀವಿ: ದಳಪತಿ ವಿಜಯ್‌ ಅಬ್ಬರದ ಭಾಷಣ

ಚೆನ್ನೈ: ತಮಿಳುನಾಡಿನ ರಾಜಕಾರಣದಲ್ಲಿ ನಟ ದಳಪತಿ ವಿಜಯ್ ಸಂಚಲನ ಸೃಷ್ಟಿಸಿದ್ದಾರೆ.
ವಿಲ್ಲುಪುರಂನ ವಿಕ್ರವಾಂಡಿಯಲ್ಲಿ ತಮಿಳಿಗ ವೆಟ್ರಿ ಕಾಳಗಂʼ ಪಕ್ಷದ ಮೊದಲ ಬೃಹತ್ ಸಮಾವೇಶ ನಡೆಯಿತು. ಮೆಗಾ ರ‍್ಯಾಲಿಯಲ್ಲಿ ಕಣ್ಣು ಹಾಯಿಸಿದ ದೂರವೂ ಜನಸಾಗರವೇ ಸೇರಿತ್ತು.ನಮ್ಮ ನಾಡು’ ಹೆಸರಿನಲ್ಲಿ ನಡೆಸಿದ ಮೊದಲ ರಾಜಕೀಯ ಭಾಷಣದಲ್ಲೇ ವಿಜಯ್ ಅಬ್ಬರದ ಭಾಷಣ ಮಾಡಿದರು.

ಇನ್ಮೇಲೆ ನಾನು..ನೀನು.. ಅವರು.. ಇವರು.. ಅನ್ನೋದಿಲ್ಲ. ಇನ್ನು ಮಂದೆ ತಮಿಳುನಾಡಿನಲ್ಲಿ `ನಾವುʼ ಆಗಿ ಹೋರಾಡೋಣ. ಕೇವಲ ವಿಜ್ಞಾನ ತಂತ್ರಜ್ಞಾನ ಬದಲಾದರೆ ಸಾಕಾ..? ಯಾಕೆ ರಾಜಕೀಯ.. ರಾಜಕಾರಣಿಗಳು ಬದಲಾಗಬಾರದಾ? ಇನ್ಮೇಲೆ ರಾಜಕಿಯವನ್ನು ಬದಲಾಯಿಸೋಣ.. ಅಭಿವೃದ್ಧಿ ರಾಜಕಾರಣ ಮಾಡೋಣ. ಪೆರಿಯಾರ್, ಕಾಮರಾಜ್ ಅವರ ಮಾರ್ಗದರ್ಶನ, ಮಹಾನ್ ನಾಯಕ ಅಂಬೇಡ್ಕರ್ ಸಂವಿಧಾನದ ಮಾರ್ಗದಲ್ಲಿ ನಡೆಯೋಣ ಅಂತ ಸಮಾಜಸುಧಾರಕಾರು ಹಾಗೂ ತಮಿಳುನಾಡಿನ ಹೋರಾಟಗಾರರನ್ನು ನೆನೆದು ವಿಜಯ್ ಭಾಷಣ ಮಾಡಿದರು.


ಬಿಜೆಪಿ ಸೈದ್ಧಾಂತಿಕ ಎದುರಾಳಿಯಾಗಿದ್ದು, ಡಿಎಂಕೆ ಅದರ ರಾಜಕೀಯ ವಿರೋಧಿಯಾಗಿದೆ. ಸಮಾಜದಲ್ಲಿ ಒಡಕು ಸೃಷ್ಟಿಸುವ ಒಂದು ಗುಂಪು ಇದೆ. ವಿಭಜನೆಯನ್ನು ಸೃಷ್ಟಿಸುವವರೇ ನಮ್ಮ ಮೊದಲ ಶತ್ರು. ದ್ರಾವಿಡ ಸಿದ್ಧಾಂತವನ್ನು ಎತ್ತಿಹಿಡಿಯುತ್ತೇವೆ ಎಂದು ಹೇಳಿಕೊಳ್ಳುವ ಆದರೆ ತಮಿಳುನಾಡನ್ನು ಕುಟುಂಬ ಉದ್ಯಮವಾಗಿ ಬಳಸಿಕೊಳ್ಳುತ್ತಿರುವವರು ನಮ್ಮ ಮುಂದಿನ ಪ್ರತಿಸ್ಪರ್ಧಿಗಳು. ಬಿಜೆಪಿ ನಮ್ಮ ಸೈದ್ಧಾಂತಿಕ ಎದುರಾಳಿ ಆದರೆ ಡಿಎಂಕೆ ನಮ್ಮ ರಾಜಕೀಯ ಎದುರಾಳಿ” ಎಂದು ವಿಜಯ್ ಹೇಳಿದ್ದಾರೆ.


ಅಲ್ಲದೇ, ನಮ್ಮನ್ನು ನೋಡಿದವರಿಗೆ ಇವರಿಗೆ ವಿವೇಕ ಇದೆ ಅಂತ ಮಾತಾಡಬೇಕು. ಯಾವುದೇ ಕಾರಣಕ್ಕೂ ನಮ್ಮ ರಾಜಕೀಯದಲ್ಲಿ ರಾಜೀ ಅನ್ನೋ ಪದವೇ ಇಲ್ಲ. ಹೆಜ್ಜೆ ಮುಂದಿಟ್ಟಾಗಿದೆ, ಪರಿಣಾಮ ಎದುರಿಸಿ ಮುನ್ನಡೆಯೋಣ. ಹಿಂದೆ ಸರಿಯುವ ಮಾತೇ ಇಲ್ಲ ಎಂದು ಗುಡುಗಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ನಮ್ಮದು ಶೂನ್ಯ ಸಹಿಷ್ಣುತೆ. ನಾನು ಪಕ್ಕಾ ಪ್ರಾಕ್ಟಿಕಲ್, ಈಜೋಕೆ ಬರದವನು ಮೀನು ಹಿಡೀತಾನಾ ಅಂತ ಟೀಕಿಸ್ತಿದ್ದಾರೆ. ನಾವು ಮೀನು ಹಿಡಿದೇ ತೋರಿಸೋಣ. ಆಲ್ಟರ್‌ನೇಟಿವ್‌ ಪಾಲಿಟಿಕ್ಸ್ ಮಾತಿಲ್ಲ. ನಾನು ಎಕ್ಟ್ರಾ ಲಗೇಜ್ ಆಗಲು ಇಲ್ಲಿ ಬಂದಿಲ್ಲ. ನಮ್ಮ ನಾಡಿಗಾಗಿ ಎಕ್ಟ್ರಾ ಮಾಡಲು ಬಂದಿದ್ದೇನೆ. ಇಲ್ಲಿ ನೀವೆಲ್ಲಾ ಸೇರಿರೋದು ಹಣದಿಂದ ಅಲ್ಲ. ಒಂದು ಒಳ್ಳೇ ಕಾರಣಕ್ಕಾಗಿ ಸ್ವಯಂಪ್ರೇರಿತವಾಗಿ ಸೇರಿದ್ದೀರಿ. ನಾವೆಲ್ಲಾ ಒಳ್ಳೆಯದನ್ನು ಮಾಡಲು ಇರುವ ಸೈನಿಕರಿದ್ದಂತೆ. ಸೋಷಿಯಲ್ ಮೀಡಿಯಾದ ಟ್ರೋಲ್‌ಗೆಲ್ಲಾ ಅಂಜಲ್ಲ. ಅಂದ್ರು. 2026ರ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರದಲ್ಲಿ ನಿಲ್ತೇವೆ, ಬಹುದೊಡ್ಡ ಪಕ್ಷವಾಗಿ ಗೆಲ್ತೇವೆ ಅಂತ ವಿಜಯ ಹೇಳಿದ್ದಾರೆ

Leave a Reply

Your email address will not be published. Required fields are marked *