ಮಗುವಿಗೆ ಕಚ್ಚಿ ನೆಲಕ್ಕೆಸೆದು ಕ್ರೂರವಾಗಿ ಹಿಂಸೆ : ಡೇ ಕೇರ್ ಸಿಬ್ಬಂದಿ ಪೊಲೀಸ್ ವಶಕ್ಕೆ

ನೋಯ್ಡಾ: ಡೇ ಕೇರ್ ಸಿಬ್ಬಂದಿ ಮಗುವಿಗೆ ಕಚ್ಚಿ ನೆಲಕ್ಕೆಸೆದು ಕ್ರೂರವಾಗಿ ಹಿಂಸೆ ನೀಡಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹಿಳೆಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಇಲ್ಲಿನ ಸೆಕ್ಟರ್ 137 ರಲ್ಲಿರುವ ಡೇ ಕೇರ್ ಒಂದರಲ್ಲಿ ದಂಪತಿಗಳು ತಮ್ಮ 15 ತಿಂಗಳ ಮಗುವನ್ನು ಸೇರಿಸಿದ್ದಾರೆ.

ಆದರೆ ಕೆಲ ದಿನಗಳ ಬಳಿಕ ಮಗುವಿನ ಮೈಮೇಲೆ ಗಾಯದ ಕಲೆಗಳು ಕಾಣಿಸಿಕೊಂಡಿದೆ. ಇದರಿಂದ ಗಾಬರಿಗೊಂಡ ಪೋಷಕರು ಡೇ ಕೇರ್ ಸಿಬ್ಬಂದಿಯಲ್ಲಿ ವಿಚಾರಿಸಿದ್ದಾರೆ. ಆಕೆ ಸಮರ್ಪಕ ಉತ್ತರ ನೀಡದೆ ಪೋಷಕರ ಮೇಲೆಯೇ ದರ್ಪದಿಂದ ಉತ್ತರಿಸಿದ್ದಾಳೆ ಎನ್ನಲಾಗಿದೆ.

ಇದರಿಂದ ಸಿಟ್ಟಿಗೆದ್ದ ಪೋಷಕರು ಡೇ ಕೇರ್ ನಡೆಸುತ್ತಿದ್ದ ಅಧಿಕಾರಿಗಳಿಗೆ ದೂರು ನೀಡಿ ಅಲ್ಲಿನ ಸಿಸಿ ಕ್ಯಾಮೆರಾ ಪರಿಶೀಲಿಸಿದ್ದು, ಈ ವೇಳೆ ಪೋಷಕರು ಆಘಾತಕಾರಿ ದೃಶ್ಯಗಳು ಕಂಡು ಬೆಚ್ಚಿ ಬಿದ್ದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು,ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *