ಬೆಳ್ತಂಗಡಿ : ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಪಕ್ಷ ಸಂಘಟನಾ ದೃಷ್ಟಿಯಿಂದ ನಡೆದ ಮಲವಂತಿಗೆ ಶಕ್ತಿ ಕೇಂದ್ರ ಪಂಚಾಯತ್ ಮಟ್ಟದ ಸಭೆಯು ಆ 10 ರಂದು ನಡೆಯಿತು.
ಕಾರ್ಯಕ್ರಮವನ್ನು ಹಿರಿಯ ಕಾರ್ಯಕರ್ತರಾದ ಕೆಮ್ಮಟೆ ವಸಂತ ಗೌಡರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಮಂಡಲ ಕೋಶಾಧಿಕಾರಿ ಜಯಂತ ಗೌಡ ಗುರಿಪಳ್ಳ ರವರು ಉದ್ಘಾಟನಾ ಭಾಷಣ ಮಾಡಿದರು. ಶಾಸಕರಾದ ಹರೀಶ್ ಪೂಂಜರವರು ಪಾಲ್ಗೊಂಡು ಕಾರ್ಯಕರ್ತರೊಂದಿಗೆ ಪಕ್ಷ ಸಂಘಟನೆ ಮತ್ತು ಕಾರ್ಯಚಟುವಟಿಕೆಯ ಕುರಿತು ವಿಸ್ತ್ರುತವಾಗಿ ಸಮಾಲೋಚನೆ ನಡೆಸಿದರು.

ಈ ವೇಳೆ ಯುವ ವಕೀಲರಾದ ಯತೀಶ್ ಪಣೆಕ್ಕರ, ರೈತಮೋರ್ಚಾ ಜಿಲ್ಲಾಧ್ಯಕ್ಷರಾದ ಗಣೇಶ್ ಗೌಡ ನಾವೂರು, ಜಿಲ್ಲಾ ಉಪಾಧ್ಯಕ್ಷರಾದ ಜಯಂತ್ ಕೋಟ್ಯಾನ್,ಲಾಯಿಲ ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ಅರವಿಂದ್ ಲಾಯಿಲ ಬೈಠಕ್ ನೀಡಿದರು.

ಈ ಸಂದರ್ಭದಲ್ಲಿ ಲಾಯಿಲ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಪ್ರಕಾಶ್ ಜೈನ್ ಎಳನೀರು, ಮಲವಂತಿಗೆ ಪ್ರಭಾರಿ ಆನಂದ ಅಡೀಲ್, ಮಲವಂತಿಗೆ ಶಕ್ತಿ ಕೇಂದ್ರ ಅಧ್ಯಕ್ಷರಾದ ಮಧುಸೂಧನ್ ಮಲ್ಲ, ಪಂಚಾಯತ್ ಉಪಾಧ್ಯಕ್ಷರಾದ ರೋಹಿಣಿ ಜಯವರ್ಮ,ಬೂತ್ ಸಮಿತಿಯ ಅಧ್ಯಕ್ಷರುಗಳಾದ ದ ಗಣೇಶ್ ಗೌಡ, ರಾಧಾಕೃಷ್ಣ ನಡುಮಜಲು, ಅಶೋಕ್ ಕಡ್ತಿಕುಮೇರು, ಕಾರ್ಯದರ್ಶಿಗಳಾದ ಸತೀಶ್ ಮ್. ಕೆ, ಪುರಂದರ ನಂದಿಕಾಡು, ವಿನಯ ಚಂದ್ರ ಕಾಂಜಾನು, ಜನಪ್ರತಿನಿದಿನಗಳು ಹಾಗೂ ಅನ್ಯನ್ಯ ಜವಾಬ್ದಾರಿಯ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು. ಜಯಂತ ಹೆಗ್ಡೆ ಬಿಜೆಪಿ ಗೀತೆ ಹಾಡಿದರು. ಉಮೇಶ್ ಮಾಲೂರುರವರು ಸ್ವಾಗತಿಸಿ ನಿರ್ವಹಿಸಿದರು.




