ಮುಂಬಯಿ: ಸಮಯ, ಶಕ್ತಿ, ಸಂಪತ್ತು ಮತ್ತು ದೇಹವು ನಿಮ್ಮನ್ನುಬೆಂಬಲಿಸಬಹುದು ಅಥವಾ ಬೆಂಬಲಿಸದೇ ಇರಬಹುದು ಆದರೆ ಒಳ್ಳೆಯ ಸ್ವಭಾವ, ತಿಳುವಳಿಕೆ ಮತ್ತು ಉತ್ತಮ ಸಂಬಂಧಗಳು ನಿಮ್ಮ ಜೀವನದುದ್ದಕ್ಕೂ ಯಾವಾಗಲೂ ನಿಮ್ಮನ್ನು ಬೆಂಬಲಿಸುತ್ತವೆ. ಇವೆಲ್ಲಕ್ಕೂ ಸಾಂಘಿಕಬದುಕು ಅತ್ಯವಶ್ಯವಾಗಿದ್ದು, ಸಾಂಘಿಕತೆಯೇ ಸಂಘ ಸಂಸ್ಥೆಯಾಗಿದೆ. ಐಡಿಕಾರ್ಡ್‌ಗಾಗಿ ಸದಸ್ಯರಾಗದಿರಿ. ಬದಲಾಗಿ ಸಾಂಘಿಕ ಬದುಕಿಗೆ ಶಕ್ತಿ ತುಂಬಿಐಕ್ಯತೆಯ ಅಸ್ಮಿತೆಯನ್ನು ಬಲ ಪಡಿಸಲು ಸಂಘ-ಸಂಸ್ಥೆಯ ಸದಸ್ಯರಾಗಿರಿ ಎಂದು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ(ರಿ.) ಅಧ್ಯಕ್ಷ ರೋನ್ಸ್ ಬಂಟ್ವಾಳ್ ಕರೆಯಿತ್ತರು.
ಉಪನಗರ ಅಂಧೇರಿ ಪೂರ್ವದ ಸಾಲೀಟರಿ ಕಾರ್ಪೋರೆಟ್ ಪಾರ್ಕ್‌ಇದರ ಕ್ಲಬ್ ಹೌಸ್ ಸಭಾಗೃಹದಲ್ಲಿ ಆದಿತ್ಯವಾರ ಕನ್ನಡಿಗ ಪತ್ರಕರ್ತರಸಂಘ ತನ್ನ 17ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಬಂಟ್ವಾಳ್ ಮಾತನಾಡಿ ಪತ್ರಕರ್ತರಿಗೆ ಸ್ವಂತಿಕೆಯ ಅರಿವು ಇರಬೇಕು. ನಾವು ಇತರರೊಂದಿಗೆ ಹೇಗೆ ವರ್ತಿಸುತ್ತೇವೆ ಎಂಬುದರ ಮೇಲೆ ಅದು ಅವಲಂಬಿತವಾಗಿರುತ್ತದೆ. ಪ್ರಸಕ್ತ ಕಾಲದಲ್ಲಿ ಸಮಾಜದ ಎದುರು ಕೆಟ್ಟವರಾಗಲು, ಯಾವುದೆ ಕೆಟ್ಟ ಅಥವ ಹಾಳು ಕೆಲಸ ಮಾಡುವ ಅಗತ್ಯ ಇಲ್ಲ, ನನ್ನಹಾಗೆ ಬರೇ ಇದ್ದುದನ್ನು ಇದ್ದ ಹಾಗೆ ಹೇಳಿದರೆ ಯಾ ಕಟು ಸತ್ಯ ಹೇಳಿದರೆ ಸಾಕು ನಾವು ನಿಷ್ಠುರರಾಗಿ ಬಿಡುತ್ತೇವೆ. ನಮ್ಮ ಬದುಕು ಎಷ್ಟು ಸಂತೋಷವಾಗಿದೆ ಎನ್ನುವುದುಕ್ಕಿಂತ, ಎಷ್ಟು ನೆಮ್ಮದಿಯಾಗಿದೆ ಎನ್ನುವುದುಮುಖ್ಯ ಎಂದರು.

ವೇದಿಕೆಯಲ್ಲಿ ಕಪಸಮ ಉಪಾಧ್ಯಕ್ಷ ಡಾ| ಶಿವ ಮೂಡಿಗೆರೆ, ಗೌ| ಪ್ರ|ಕಾರ್ಯದರ್ಶಿ ಸಾ.ದಯಾ (ದಯಾನಂದ್ ಸಾಲ್ಯಾನ್), ಗೌ|ಕೋಶಾಧಿಕಾರಿ ವಿಶ್ವನಾಥ್ ಪೂಜಾರಿ ನಿಡ್ಡೋಡಿ, ಜತೆ ಕಾರ್ಯದರ್ಶಿ ಸವಿತಾ ಎಸ್.ಶೆಟ್ಟಿ, ಜತೆ ಖಜಾಂಚಿ ಡಾ ದುರ್ಗಪ್ಪ ವೈ.ಕೋಟಿಯವರ್ ಉಪಸ್ಥಿತರಿದ್ದರು.
ಸಲಹಾ ಸಮಿತಿ ಸದಸ್ಯ ಸಿಎ|ಐ.ಆರ್ ಶೆಟ್ಟಿ ಮಾತನಾಡಿ ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದ್ದರಿಂದ ಪತ್ರಕರ್ತರಿಗೆ ಸಲಹೆ ನೀಡುವುದು ಸುಲಭವಲ್ಲ. ಏಕೆಂದರೆಮಾಧ್ಯಮದ ಸಾಂವಿಧಾನಿಕ ಪಾತ್ರ ಹಿರಿದಾಗಿದ್ದು ಪತ್ರಕರ್ತರು ಪ್ರತಿಷ್ಠೆಯಸ್ಥಾನಮಾನವುಳ್ಳವರಾಗಿದ್ದಾರೆ. ಮಹಾರಾಷ್ಟ್ರದಲ್ಲಿನ ಕನ್ನಡಿಗ ಪತ್ರಕರ್ತರು ನೈತಿಕತೆಯನ್ನು ಹೊಂದಿದ್ದು ವೃತ್ತಿನಿಷ್ಠರಾಗಿದ್ದು ಶಿಸ್ತನ್ನು ಮೈಗೂಡಿಸಿದ್ದಾರೆ. ಕನ್ನಡ ಭಾಷೆ ಮತ್ತು ಒಳ ಹೊರನಾಡ ನಡುವೆ ಸೇತುವೆಯಾಗಿ ಕಾರ್ಯನಿರ್ವಘಿಸುತ್ತಿರುವುದು ಸ್ತುತ್ಯಾರ್ಹ ಎಂದರು.

ಸಲಹಾ ಸಮಿತಿ ಸದಸ್ಯ ಸಿಎ|ಜಗದೀಶ್ ಬಿ.ಶೆಟ್ಟಿ ಮಾತನಾಡಿ ಸಮಾಜ ಪ್ರತಿಬಿಂಬವಾಗಿದ್ದಾರೆ. ಸಮಾಜದ ಆಗುಹೋಗುಗಳ ಎಲ್ಲಾ ಪರಿಸ್ಥಿತಿಗಳಿಗೆ ಹೊಂದಿಕೊಂಡು ಹೋಗುವ ಧೀಮಂತರು. ವಾಕ್ ಮತ್ತು ಅಭಿವ್ಯಕ್ತ ಸ್ವಾತಂತ್ರ ದ ಕಾವಲುಗಾರರಾದ ಪತ್ರಕರ್ತರು ಸಮಾಜದ ಧ್ವನಿಯಾಗಿದ್ದಾರೆ. ಆದ್ದರಿಂದ ಪತ್ರಕರ್ತರಲ್ಲಿ ಅಭಿಮಾನದ ಜೊತೆ ಪ್ರೋತ್ಸಹ ನೀಡುವ ಅಗತ್ಯವೆ ಎಂದ ಸಂಘದ ಶ್ರೇಯಸ್ಸಿಗೆ ಶುಭಕೋರಿದರು.

ಸದಸ್ಯರ ಪರವಾಗಿ ಗಂಗಾಧರ್ ಪಣಿಯೂರು, ವಿಶ್ವನಾಥ್ ನಿಡ್ಡೋಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಸಲಹಿಹೆಗಳನ್ನಿತ್ತು ಸಂಘದ ವಿಕಸನಕ್ಕಾಗಿ ಆಶಯ ವ್ಯಕ್ತಪಡಿದರು
ಸಭೆಯಲ್ಲಿ ಕಪಸಮ ಕಾರ್ಯಕಾರಿ ಸಮಿತಿ ಸದಸ್ಯರಾದ ರಂಗ ಎಸ್.ಪೂಜಾರಿ, ಡಾ|ಜಿ.ಪಿ ಕುಸುಮಾ, ಅನಿತಾ ಪಿ.ಪೂಜಾರಿ ತಾಕೋಡೆ, ಪೀಟರ್ ಎಫ್.ಡಿಸೋಜಾ, ಗೋಪಾಲ ಪೂಜಾರಿ ತ್ರಾಸಿ, ಶ್ಯಾಮ ಎಂ. ಹಂಧೆ, ಸದರಾಮ ಎನ್.ಶೆಟ್ಟಿ ಸಂಪದಮನೆ, ಸಲಹಾ ಸಮಿತಿ ಸದಸ್ಯರಾದ ನ್ಯಾ|ಕೆ.ಪಿ ಪ್ರಕಾಶ್ ಎಲ್.ಶೆಟ್ಟಿ, ಸುರೇಂದ್ರ ಎ.ಪೂಜಾರಿ, ಲಕ್ಷ್ಮಣ್ ಸಿ.ಪೂಜಾರಿ,ಗ್ರೇಗೋರಿ ಡಿ’ಅಲ್ಮೇಡಾ, ವಿಶೇಷ ಆಮಂತ್ರಿತ ಸದಸ್ಯರಾದ ಹರೀಶ್ ಪೂಜಾರಿ ಕೊಕ್ಕರ್ಣೆ, ಡಾ| ಶಿವರಾಮ ಕೆ.ಭಂಡಾರಿ, ಚಂದ್ರಶೇಖರ್ ಆರ್.ಬೆಳ್ಚಡ, ಸುಧಾಕರ್ ಉಚ್ಚಿಲ್ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.

ಡಾ ಶಿವ ಮೂಡಿಗೆರೆ ಸ್ವಾಗತಿಸಿದರು. ಸಾ.ದಯಾ (ದಯಾನಂದ್) ಗತ ವಾರ್ಷಿಕ ಮಹಾಸಭೆ ವರದಿ ವಾಚಿಸಿದರು. ವಿಶ್ವನಾಥ್ ನಿಡ್ಡೋಡಿ ಗತ ವಾರ್ಷಿಕ ಲೆಕ್ಕಪತ್ರಗಳ ಮಾಹಿತಿ ನೀಡಿದರು. ಡಾ|ದುರ್ಗಪ್ಪ ವೈ. ಕೋಟಿಯಾವರ್ ಅವರು ಸಂಘದ 2025-2026ನೇ ಸಾಲಿನ ಮುಂಗಡ ಪತ್ರ ಮಂಡನೆ (ಬಜೆಟ್) ಮಂಡಿಸಿದರು. ನಂತರ ಸಂಘದ 2026ನೇ ಸಾಲಿನ ಲೆಕ್ಕಪರಿಶೋಧಕರನ್ನಾಗಿ ಪ್ರತಿಷ್ಠಿತ ಚಾರ್ಟರ್ಡ್ ಎಕೌಂಟೆಂಟ್ ಸಿಎ ಐ.ಆರ್ ಶೆಟ್ಟಿ ಎಂಡ್ ಕಂಪೆನಿ ಸಂಸ್ಥೆಯನ್ನೇ ಪುನಃರ್ ನೇಮಕ ಗೊಳಿಸಲಾಯಿತು. ಚಂದ್ರಶೇಖರ್ ಆರ್.ಬೆಳ್ಚಡ ಅವರು ಕಪಸಮ 2025 – 2028ನೇ ಕಾರ್ಯಕಾರಿ ಸಮಿತಿಯ ಚುನಾವಣಾ ಫಲಿತಾಂಶ ಪ್ರಕಟಿಸಿ ನೂತನ ಸಮಿತಿಗೆ ಆಯ್ಕೆಯಾದ ೧೬ ಸದಸ್ಯರ ಹೆಸರುಗಳನ್ನು ಅಧಿಕೃತವಾಗಬಹಿರಂಗ ಪಡಿಸಿದರು.

ಗತ ಸಾಲಿನಲ್ಲಿ ಅಗಲಿದ ಎಲ್ಲಾ ಹಿರಿಕಿರಿಯ ಪತ್ರಕರ್ತರಿಗೆ ಸಭೆಯಲ್ಲಿ ಮೌನ ಪ್ರಾರ್ಥನೆಯೊಂದಿಗೆ ಬಾಷ್ಪಾಂಜಲಿ ಕೋರಲಾಯಿತು. ಸವಿತಾ ಎಸ್.ಶೆಟ್ಟಿ ವಾರ್ಷಿಕ ಚಟುವಟಿಕೆಗಳ ಮಾಹಿತಿಯನ್ನಿತ್ತು, ವಂದಿಸಿದರು.




