ಹೈದರಾಬಾದ್: ತುಪ್ಪ ಕಲಬೆರಕೆ ಪ್ರಕರಣಕ್ಕೆ ಸಂಬ೦ಧಿಸಿದ೦ತೆ ತಿರುಮಲ ತಿರುಪತಿ ದೇವಸ್ಥಾನಕ್ಕೆ ಐದು ವರ್ಷಗಳಿಗೂ ಹೆಚ್ಚು ಕಾಲ ಕಲಬೆರಕೆ ತುಪ್ಪವನ್ನು ಪೂರೈಸಲಾಗಿದೆ ಎ೦ದು ವಿಶೇಷ ತನಿಖಾ ತಂಡ ತಿಳಿಸಿದೆ.

ತುಪ್ಪದಲ್ಲಿ ರಾಸಾಯನಿಕ ಬಳಕೆಯಾಗಿರೋದು ಪತ್ತೆಯಾಗಿದ್ದು, ಟಿಟಿಡಿಗೆ ತುಪ್ಪ ಪೂರೈಸುವ ಒಪ್ಪಂದ ಮಾಡಿಕೊ೦ಡಿದ್ದ ಖಾಸಗಿ ಕಂಪನಿಯು ಡೈರಿಯಲ್ಲಿ ಮೊನೊಡಿಗ್ಲಿಸರೈಡ್‌ಗಳು ಮತ್ತು ಅಸಿಟಿಕ್ ಆಸಿಡ್ ಎಸ್ಟರ್‌ನಂತಹ ರಾಸಾಯನಿಕಗಳನ್ನು ಬಳಕೆ ಮಾಡಿದೆ ಎಂದು ಎಸ್‌ಐಟಿ ನಡೆಸಿರುವ ತನಿಖೆ ವೇಳೆ ತಿಳಿದುಬಂದಿದೆ.

ಈ ಹಿಂದೆ ಕರ್ನಾಟಕ ನಂದಿನಿ ತುಪ್ಪ ದರ ಹೆಚ್ಚು ಎ೦ದು ತಿರಸ್ಕರಿಸಿದ್ದ ತಿರುಮಲ ತಿರುಪತಿ ದೇಗುಲದ ಅಧಿಕಾರಿಗಳಿಗೆ ಅಗ್ಗದ ದರದಲ್ಲಿ ತುಪ್ಪ ರವಾನೆ ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದ್ದ ಖಾಸಗಿ ಡೈರಿ ವಂಚನೆ ಮಾಡಿದ್ದು ಹಾಲನ್ನೇ ಬಳಸದೇ ರಾಸಾಯನಿಕಗಳಿಂದ ತುಪ್ಪ ತಯಾರಿಸಿ ಭಕ್ತರ ನಂಬಿಕೆಗೆ ದ್ರೋಹ ಬಗೆದಿರುವುದು ತನಿಖೆಯಿಂದ ಬಯಲಾಗಿದೆ.



