Breaking
25 Sep 2026, Fri

ಯಶಸ್ವಿಯಾಗಿ ನೆರವೇರಿದ ಸ್ವಸ್ತಿಕ ಕಬಡ್ಡಿ ಲೀಗ್ – 2K25 ಪಂದ್ಯಾಟ

ಮಂಗಳೂರು: ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಶಾಲೆಯ ವಿದ್ಯಾರ್ಥಿ ಸಂಘದ ವತಿಯಿಂದ ಹಾಗೂ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುಳಿಯ ಸಾತ್ವಿಕ್ ಅವರ ಚುನಾವಣಾ ಘೋಷಣಾಪತ್ರದ ಭಾಗವಾಗಿ ಆಯೋಜಿಸಲಾದ ಸ್ವಸ್ತಿಕ ಕಬಡ್ಡಿ ಲೀಗ್ 2K25 ಮಂಗಳೂರು ಪಂದ್ಯಾಟವು ಸುಲ್ತಾನ್ ಬಥೇರಿಯಲ್ಲಿರುವ ಸ್ವಸ್ತಿಕ ವಾಟರ್‌ಫ್ರಂಟ್ ಮೈದಾನದಲ್ಲಿ ನೆರವೇರಿತು.

ಪಂದ್ಯಾಟವನ್ನು ಯಥಾರ್ಥ್ ಸೋಶಿಯಲ್ ಸಂಸ್ಥಾಪಕ ಈಶ್ವರ ಶೆಟ್ಟಿ ಅವರು ಫಿತೂರ ಕತ್ತರಿಸಿ, ತೆಂಗಿನ ಕಾಯಿ ಒಡೆದು ಉದ್ಘಾಟಿಸಿದರು.

ಎಕ್ಸುಬ್ರಾಂಡ್ ಡಿ ಸಹ ಸಂಸ್ಥಾಪಕ ವರುಣ್ ಪ್ರಭು ಅವರು ಅತಿಥಿಯಾಗಿ ಭಾಗವಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಶಾಲೆಯ ಅಧ್ಯಕ್ಷರಾದ ಡಾ. ರಾಘವೇಂದ್ರ ಹೊಳ್ಳ ಎನ್ ವಹಿಸಿದ್ದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ನೀಡಲಾಯಿತು.

ಪಂದ್ಯಾಟದ ಫಲಿತಾಂಶ
ಗಂಡು ಮಕ್ಕಳ ವಿಭಾಗ
1ನೇ ಸ್ಥಾನ – ಟೀಮ್ ಯುವಶಕ್ತಿ (ಮಾಲೀಕರು: ಮುಳಿಯ ಸಾತ್ವಿಕ್ ಮತ್ತು ಕೃತಿಕಾ ರಾವ್)
2ನೇ ಸ್ಥಾನ – ಟೀಮ್ ಹಾಕ್ಸ್ (ಮಾಲೀಕರು: ಲಾಯಲ್ ಮತ್ತು ಸಂಜಯ್)
3ನೇ ಸ್ಥಾನ – ಟೀಮ್ ರೋರಿಂಗ್ ಪ್ಯಾಂಥರ್ಸ್ (ಮಾಲೀಕರು: ಶ್ರೀಶರಣ್ ಮೋಗ್ರಾ ಮತ್ತು ರಮ್ಯಾ ಕುಳಾಲ್)
4ನೇ ಸ್ಥಾನ – ಟೀಮ್ ಕಳಿಯುಗಂ (ಮಾಲೀಕರು: ಅದ್ವಿತ್ ಶೆಟ್ಟಿ ಮತ್ತು ಶ್ರೇಯಸ್)

ವೈಯಕ್ತಿಕ ಪ್ರಶಸ್ತಿಗಳು:
ಅತ್ಯುತ್ತಮ ರೈಡರ್ – ಅಜಯ್ ಪೂಜಾರಿ
ಅತ್ಯುತ್ತಮ ಡಿಫೆಂಡರ್ – ಆಕಾಶ್ ವೈ

ಹೆಣ್ಣು ಮಕ್ಕಳ ವಿಭಾಗ
1ನೇ ಸ್ಥಾನ – ಟೀಮ್ ಯುವಶಕ್ತಿ ಕಳಿಯುಗಂ (ಮಾಲೀಕರು: ಮುಳಿಯ ಸಾತ್ವಿಕ್, ಕೃತಿಕಾ ರಾವ್, ಅದ್ವಿತ್ ಶೆಟ್ಟಿ ಮತ್ತು ಶ್ರೇಯಸ್) ವಿಜೇತರಾಗಿದ್ದಾರೆ.

ಕಾರ್ಯಕ್ರಮದಲ್ಲಿ ಡಾ. ರಾಘವೇಂದ್ರ ಹೊಳ್ಳ ಎನ್, ಪ್ರಾಂಶುಪಾಲರಾದ ಡಾ. ಮಾಲಿನಿ ಎನ್ ಹೆಬ್ಬಾರ್, ಡೀನ್, ಯೆನೆಪೊಯ ಕಾಲೇಜಿನ ವಸಂತ ಸುವರ್ಣ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುಳಿಯ ಸಾತ್ವಿಕ್, ಕ್ರೀಡಾ ಕಾರ್ಯದರ್ಶಿಗಳದ ಜೈಸನ್ ಪಿಂಟೋ ಮತ್ತು ಕೃತಿಕಾ ರಾವ್, ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *