ಪುತ್ತೂರು: ನ. 19ರಂದು ಪುತ್ತೂರಿನಲ್ಲಿ ನಡೆಯುವ “ಅಟಲ್ ವಿರಾಸತ್” ಕಾರ್ಯಕ್ರಮದ ಪೂರ್ವಭಾವಿ ಸಭೆ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸತೀಶ್ ಕುಂಪಲರ ಅಧ್ಯಕ್ಷತೆಯಲ್ಲಿ ನಡೆಯಿತು.


ಈ ವೇಳೆ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ನವಂಬರ್ 19ರಂದು ಪುತ್ತೂರಿನ ವೆಂಕಟರಮಣ ದೇವಸ್ಥಾನದ ಬಳಿ ದೇಶ ಕಂಡ ಅಪ್ರತಿಮ ನಾಯಕ ಅಜಾತ ಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮಶತಾಬ್ಧಿ ಜಿಲ್ಲಾ ಕಾರ್ಯಕ್ರಮ ಪುತ್ತೂರಿನಲ್ಲಿ ನಡೆಯಲಿದೆ ಎಂದು ಹೇಳಿದರು.

ಈ ಸಂದರ್ಭ ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ದಯಾನಂದ್ ಶೆಟ್ಟಿ, ನಗರ ಮಂಡಲ ಅಧ್ಯಕ್ಷರಾದ ಶಿವಕುಮಾರ್, ವಿಧಾನ ಪರಿಷತ್ತಿನ ಮಾನ್ಯ ಶಾಸಕರು ಹಾಗೂ ಅಟಲ್ ವಿರಾಸತ್ ನ ಜಿಲ್ಲಾ ಸಂಚಾಲಕರಾದ ಕಿಶೋರ್ ಕುಮಾರ್ ಬೊಟ್ಯಾಡಿ ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಹಾಗೂ ಪುತ್ತೂರಿನ ಪ್ರಭಾರಿಯವರಾದ ಸುನಿಲ್ ಆಳ್ವ, ನಗರಸಭೆ ಅಧ್ಯಕ್ಷರಾದ ಲೀಲಾವತಿಯವರು ಉಪಸ್ಥಿತರಿದ್ದರು.




