ಪುತ್ತೂರು : ನಾಲ್ಕು ತಿಂಗಳ ಹಿಂದೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಮುರ ಸಮೀಪ ಖಾಸಗಿ ಬಸ್ ಮತ್ತು ಕಾರೊಂದರ ನಡುವೆ ಅಪಘಾತ ಸಂಭವಿಸಿ ಗಂಭೀರವಾಗಿ ಗಾಯಗೊಂಡಿದ್ದ ಈಶ್ವರ ಭಟ್ ಅವರು ನ.03ರಂದು ಕೊನೆಯುಸಿರೆಳೆದಿದ್ದಾರೆ.

ಮೇ .27ರಂದು ಈಶ್ವರ ಭಟ್ ಮತ್ತು ಮಗಳು ಅಪೂರ್ವಾ ಹಾಗೂ ಅಪೂರ್ವಾ ಅವರ 3 ವರ್ಷದ ಮಗು ಇದ್ದ ಕಾರು ಮತ್ತು ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿತ್ತು. ಪರಿಣಾಮ ತಂದೆ, ಮಗಳು ಗಂಭೀರ ಗಾಯಗೊಂಡಿದ್ದರು. ಆದರೆ ಅಪೂರ್ವಾ ಅವರ 3 ವರ್ಷದ ಮಗಳು ಸಣ್ಣಪುಟ್ಟ ಗಾಯಗೊಂಡು ಅಪಾಯದಿಂದ ಪಾರಾಗಿದ್ದರು.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅಪೂರ್ವಾ ಚಿಕಿತ್ಸೆ ಫಲಿಸದೆ ಅ.7 ರಂದು ನಿಧನರಾದರು. ಬಳಿಕ ಅವರ ತಂದೆ ನಿನ್ನೆ ಸಾವನ್ನಪ್ಪಿದ್ದಾರೆ.




