Breaking
20 Jun 2026, Sat

ಮುಲ್ಕಿಯಲ್ಲಿ ಕಾರ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು

ಮುಲ್ಕಿ: ಕಾರು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ದ್ವಿಚಕ್ರ ಸವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಘಟನೆ ಮಂಗಳೂರು ಸಮೀಪದ ಮುಲ್ಕಿಯ ಕಿನ್ನಿಗೋಳಿ-ಎಸ್.ಕೋಡಿ ಬಳಿಯ ರೋಹನ್ ಎಸ್ಟೇಟ್ ಮುಂಭಾಗ ನ.2 ರಂದು ನಡೆದಿದೆ.

ಸುರೇಂದ್ರ ಎಂಬವರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿ ಮೃತಪಟ್ಟ ದುರ್ದೈವಿಯಾಗಿದ್ದಾರೆ.

ಮುಲ್ಕಿ ಪುನರೂರು ಮೊಗೇರ ದೈವಸ್ಥಾನ ಬಳಿಯ ನಿವಾಸಿಗಳಾದ ಸವಾರ ಸುರೇಂದ್ರ ಹಾಗೂ ಸಹಸವಾರ ಎಸ್. ಕೋಡಿಯಾಗಿ ಹಳೆಯಂಗಡಿ ಕಡೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಅತಿಯಾದ ವೇಗ ಮತ್ತು ನಿರ್ಲಕ್ಷ್ಯದ ಚಾಲನೆ ಮಾಡಿಕೊಂಡು ಬರುತ್ತಿದ್ದ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿತ್ತು.

Leave a Reply

Your email address will not be published. Required fields are marked *