ಕಡಬ: ಮೀನು ಮಾರಾಟಕ್ಕೆ ಸಂಬಂಧಿಸಿದಂತೆ ನಡೆದ ಮಾತಿನ ಚಕಮಕಿ ಎರಡು ಗುಂಪಿನ ಮೀನು ಮಾರಾಟಗಾರರ ನಡುವೆ ಘರ್ಷಣೆಗೆ ಕಾರಣವಾದ ಘಟನೆ ಕಡಬ ಗ್ರಾಮದ ಸಂತೆಕಟ್ಟೆ ಮೀನು ಮಾರುಕಟ್ಟೆ ಬಳಿ ನ. 01 ರಂದು ನಡೆದಿದೆ.

ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಡಿಯೋ ಪರಿಶೀಲನೆ ನಡೆಸಿದ ಕಡಬ ಪೊಲೀಸ್ ಉಪ-ನಿರೀಕ್ಷಕ ಅಭಿನಂದನ್ ಎಂ.ಎಸ್. ಅವರು, ಅಂಗಡಿ ಮಾಲೀಕರಾದ ರಾಜು ಮ್ಯಾಥ್ಯೂ ಮತ್ತು ಆಡಮ್ ಅವರ ನಡುವೆ ಮೀನು ಮಾರಾಟದ ವಿಚಾರವಾಗಿ ವಾದ-ವಿವಾದ ನಡೆದಿದ್ದು, ಬಳಿಕ ರಾಜು ಮ್ಯಾಥ್ಯೂ, ಆಡಮ್, ಫಯಾಜ್, ರಕ್ಷಿತ್ ಮಣಿ, ಮತ್ತು ನೌಫಾಲ್ ಎಂಬ ಐವರು ಗಲಾಟೆಯಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿಸಿದ್ದಾರೆ.

ಈ ಘರ್ಷಣೆಯು ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ತಂದ ಕಾರಣ, ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.



