Breaking
22 Mar 2026, Sun

ಇಲೆಕ್ಟ್ರಿಕ್ ಆಟೋಗಳು ಆರ್ ಟಿಓ ದಿಂದ ಪರವಾನಿಗೆ ಪಡೆಯಲು ದ.ಕ ಜಿಲ್ಲಾಧಿಕಾರಿ ಆದೇಶ

ಮಂಗಳೂರು : ನಗರದಲ್ಲಿ ಸಂಚರಿಸುತ್ತಿರುವ ಇಲೆಕ್ಟ್ರಿಕ್ ಆಟೋಗಳಿಗೆ ಆರ್ ಟಿಓ ಪರವಾನಿಗೆ ಪಡೆಯಲು ದ.ಕ. ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಮೂಲಕ ಮಾಹಿತಿ ನೀಡಿರುವ ಅವರು 2002ರ ಜ.20ರಿಂದ 2025ರ ಅ. 30ರ ವರೆಗೆ ಬ್ಯಾಟರಿ ಚಾಲಿತ ಇಂಧನ ಬಳಸಿ ಪರವಾನಿಗೆ ಪಡೆಯದೇ ನೋಂದಣಿಯಾಗಿರುವ ಹಾಗೂ ವಲಯ 1 ರ ವ್ಯಾಪ್ತಿ ಸಂಚರಿಸುತ್ತಿರುವ ಆಟೋ ರಿಕ್ಷಾಗಳು ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ ಪರವಾನಿಗೆ ಪಡೆದುಕೊಳ್ಳಬೇಕು, ವಲಯ 1 ವ್ಯಾಪ್ತಿಗೆ ಬರುವ ಪರವಾನಿಗೆ ಹೊಂದಿರುವ ಆಟೋ ರಿಕ್ಷಾಗಳನ್ನು ಗುರುತಿಸಿ ಆಕಾಶ ನೀಲಿ ಬಣ್ಣದ ಚೌಕಾಕಾರದಲ್ಲಿ ಬಣ್ಣವನ್ನು ಬಳಿದು ಪೊಲೀಸ್‌ ಇಲಾಖೆಯಿಂದ ಗುರುತಿನ ಸಂಖ್ಯೆ ಪಡೆಯಬೇಕು ಎಂದಿದ್ದಾರೆ.

ವಲಯ 2 ರಲ್ಲಿ 2025ರ ಅ. 30ರ ಅನಂತರ ನೋಂದಣಿ ಯಾಗುವ ವಿದ್ಯುತ್‌ ಚಾಲಿತ ಆಟೋ ರಿಕ್ಷಾಗಳು ಗ್ರಾಮಾಂತರ ಪರವಾನಿಗೆಯಾಗಿದ್ದು, ಎಲ್ಲ ಗ್ರಾಮಾಂತರ ಪರವಾನಿಗೆಯನ್ನು ವಲಯ-2 ಎಂದು ಪರಿಗಣಿಸಲಾಗುವುದು. ವಲಯ 2ರಲ್ಲಿ ಬರುವ ಎಲ್ಲ ಗ್ರಾಮಾಂತರ ಪರವಾನಿಗೆಗಳು ವಲಯ 1ರ ವ್ಯಾಪ್ತಿಗೆ ಪ್ರವೇಶಿಸಬಾರದು. ವಲಯ 2ರಲ್ಲೇ ನಿಲುಗಡೆಗೊಳಿಸಬೇಕು. ವಲಯ 2ರ ವ್ಯಾಪ್ತಿಗೆ ಬರುವ ಪರವಾನಿಗೆಗಳನ್ನು ಹೊಂದಿರುವ ಆಟೋರಿಕ್ಷಾಗಳನ್ನು ಗುರುತಿಸಿ ವೃತ್ತಾಕಾರದ ಹಳದಿ ಬಣ್ಣದ ಗುರುತಿನ ಬಣ್ಣವನ್ನು ಬಳಿದು, ಪೊಲೀಸ್‌ ಇಲಾಖೆಯಿಂದ ಗುರುತಿನ ಸಂಖ್ಯೆ ಪಡೆದುಕೊಳ್ಳಬೇಕು ಎಂದು ಆದೇಶಿಸಿದ್ದಾರೆ.

Leave a Reply

Your email address will not be published. Required fields are marked *