ಕಾರ್ಕಳ: ಮಹಿಳೆಯೋರ್ವರು ಆನ್‌ಲೈನ್ ವಂಚನೆಯಿಂದ 5 ಲಕ್ಷ ರೂ. ಕಳೆದುಕೊಂಡ ಘಟನೆ ಕಾರ್ಕಳದಲ್ಲಿ ನಡೆದಿದೆ.
ಕಾರ್ಕಳ ಕುಚಿಲಪಾದೆಯ ನಗೀನ ಬಾನು (38) ರವರಿಗೆ ಅ. 05ರಂದು ಅವರ ಟೆಲಿಗ್ರಾಂ ಖಾತೆಯಿಂದ ಮೀಶೋ ರವರ ಎಂಕೆಟಿಜಿ ಟ್ರೈನರ್ ಎಂಬ ಪೇಜ್‌ನಲ್ಲಿ ಆನ್‌ಲೈನ್ ಟಾಸ್ಕ್ ಜಾಬ್ ಬಗ್ಗೆ ಜಾಹೀರಾತು ಬಂದಿದೆ. ಅದನ್ನು ನಂಬಿದ ನಗೀನ ಬಾನುರವರು https:llenzwk.me ಎಂಬ ಪೇಜ್ ಓಪನ್ ಮಾಡಿ ರೂ. 200 ಹಾಗೂ ರೂ. 500ಗಳನ್ನು ಆರೋಪಿತರು ನೀಡಿದ ಸ್ಕಾನರ್‌ಗೆ ಕಳುಹಿಸಿದ್ದಾರೆ ಎನ್ನಲಾಗಿದೆ.

ಬಳಿಕ ಆರೋಪಿತರು ಲಾಭಾಂಶವಾಗಿ ರೂ. 450 ನೀಡಿದ್ದು, ಜಾಸ್ತಿ ಟಾಸ್ಕ್ ಮಾಡಿದಲ್ಲಿ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಅ. 06ರಿಂದ ಅ. 07ರವರಗೆ ನಗೀನ ಬಾನುರವರಿಂದ ಸ್ಕ್ಯಾನರ್, ಯುಪಿಐ ಮತ್ತು ಬ್ಯಾಂಕ್ ಖಾತೆಗಳ ಮೂಲಕ ಒಟ್ಟು ಮೊತ್ತ 5,58,975 ರೂ. ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




