Breaking
22 Mar 2026, Sun

ಕೊಟ್ಟಾರ ಕೃಷ್ಣ ಭಜನಾ ಮಂದಿರ ಬಳಿ ಡಿವೈಡರ್ ಮೇಲೇರಿದ ಖಾಸಗಿ ಸಿಟಿ ಬಸ್

ಮಂಗಳೂರು: ಖಾಸಗಿ ಸಿಟಿ ಬಸ್ಸೊಂದು ಇನ್ನೊಂದು ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ರಸ್ತೆಯ ಡಿವೈಡರ್ ಮೇಲೇರಿದ ಘಟನೆ ಮಂಗಳೂರು ನಗರದ ಕೊಟ್ಟಾರ ಕೃಷ್ಣ ಭಜನಾ ಮಂದಿರ ಎದುರು ಅ.31 ರಂದು ನಡೆದಿದೆ.

ಈ ಖಾಸಗಿ ಸಿಟಿ ಬಸ್ಸು ಮಂಗಳೂರಿನ ಸ್ಟೇಟ್ ಬ್ಯಾಂಕ್- ಕೂಳೂರು- ಕಾವೂರು-ಬೋಂದೆಲ್ ರೂಟ್ ನಲ್ಲಿ ಸಂಚರಿಸುವ ಬಸ್ ಆಗಿದ್ದು, ಚಾಲಕ ಬಸ್ಸನ್ನು ಅತಿಯಾದ ವೇಗ ಮತ್ತು ನಿರ್ಲಕ್ಷತನದಿಂದ ಚಾಲನೆ ಮಾಡಿದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಅದೃಷ್ಟವಶಾತ್ ಯಾವುದೇ ಅಪಾಯ ಉಂಟಾಗಿಲ್ಲ. ರಸ್ತೆಯಲ್ಲಿ ಓಡಾಡುವ ಇತರ ವಾಹನಗಳಿಗೂ ಯಾವುದೇ ಹಾನಿ ಸಂಭವಿಸಿಲ್ಲ. ಇನ್ನು ಅಪಘಾತಕ್ಕೆ ಕಾರಣನಾದ ಚಾಲಕನ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಟ್ರಾಫಿಕ್ ವಿಭಾಗದ ಡಿಸಿಪಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *