ಬಂಟ್ವಾಳ: ತಾಲೂಕಿನ ಪಾಣೆಮಂಗಳೂರು ಸಮೀಪದ ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ನೆಹರು ನಗರದಿಂದ ರಾಶಿ ಬಿದ್ದ ಕಸವನ್ನು ತಂದು ಕೊಪ್ಪಳಕೊಡಿ ಎಂಬಲ್ಲಿ ಸಾರ್ವಜನಿಕ ರಸ್ತೆ ಬದಿಗೆ ತಂದು ಹಾಕಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಗ್ರಾ.ಪಂ.ವಿರುದ್ಧ ಹರಿಹಾಯ ಘಟನೆ ಅ.31 ರಂದು ನಡೆದಿದೆ.

ಶಿಶು ಮಂದಿರ, ಸಹಿತ ಅನೇಕ ಮನೆಗಳಿರುವ ಪರಿಸರ ಇದಾಗಿದ್ದು, ಇಲ್ಲಿ ಕಸವನ್ನು ತಂದು ಡಂಪ್ ಮಾಡಿದ್ದಾರೆ ಎಂದು ಗ್ರಾ.ಪಂ.ವಿರುದ್ಧ ಗ್ರಾಮಸ್ಥರು ಹರಿಹಾಯ್ದಿದ್ದಾರೆ. ಬಳಿಕ ಸ್ಥಳೀಯ ಪಂಚಾಯತ್ ನ ಪಿಡಿಒ ಗೆ ಪೋನ್ ಮೂಲಕ ವಿಷಯ ತಿಳಿಸಿದ್ದಾರೆ.

ಕೂಡಲೇ ಕಸವನ್ನು ವಿಲೇವಾರಿ ಮಾಡಿ ಮತ್ತು ಎಲ್ಲಿಂದ ಕಸವನ್ನು ತರಲಾಗಿದೆಯೋ ಅಲ್ಲಿಯೇ ಕಸವನ್ನು ವಾಪಸು ಡಂಪ್ ಮಾಡುವಂತೆ ಒತ್ತಾಯ ಮಾಡಿದ್ದಾರೆ. ಕೊನೆಗೆ ಪೋಲೀಸರು ಸ್ಥಳಕ್ಕೆ ಭೇಟಿನೀಡಿದ್ದು,ಯಾವುದೇ ಗೊಂದಲವಾಗದಂತೆ ಪರಿಸ್ಥಿತಿ ತಿಳಿಗೊಳಿಸಿದರು.




