Breaking
21 Mar 2026, Sat

ಕಾರ್ಕಳ ಗೊಮಟೇಶ್ವರನ ಕುರಿತು ಅವಹೇಳನಕಾರಿ ಪೋಸ್ಟ್ ಪ್ರಕರಣ ದಾಖಲು

ಕಾರ್ಕಳ : ಇತಿಹಾಸ ಪ್ರಸಿದ್ದ ಪುಣ್ಯ ಕ್ಷೇತ್ರ ಗೊಮಟೇಶ್ವರ ಬೆಟ್ಟದಲ್ಲಿನ ಗೊಮಟೇಶ್ವರನನ್ನು ಉಲ್ಲೇಖಿಸಿ ಅವಹೇಳನಕಾರಿಯಾಗಿ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಕುರಿತು ನಿರಂಜನ್ ಜೈನ್ ಎಂಬುವರು ಪ್ರಸಾದ್ ಪೂಜಾರಿ ಎಂಬಾತನ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಸಾದ್ ಪೂಜಾರಿ ಅವರ ಫೇಸ್‌ಬುಕ್‌ ಖಾತೆಯಲ್ಲಿ ಅ. 24ರಂದು ಇನ್ನೊಂದು ಸಾರಿ ಬಿಜೆಪಿ ಬಂದಿದ್ದರೆ ಕರ್ನಾಟಕದಲ್ಲಿ ಎಂದು ಬರೆಯುತ್ತಾ ಕಾರ್ಕಳ ಗೊಮೇಟೇಶ್ವರನನ್ನು ಉಲ್ಲೇಖಿಸಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದಾರೆ.

ಇದು ಜೈನ ಧರ್ಮದ ಭಾವನೆಗೆ ಧಕ್ಕೆ ಉಂಟು ಮಾಡುವ ಉದ್ದೇಶದಿಂದ ಹಾಗೂ ಬೇರೆ ಧರ್ಮದವರೊಂದಿಗೆ ವೈಮನಸ್ಸು, ಕೋಮು ಭಾವನೆ ಕೆರಳಿಸುವ ಉದ್ದೇಶದಿಂದ ಈ ರೀತಿ ಪೋಸ್ಟ್ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Leave a Reply

Your email address will not be published. Required fields are marked *